ಹರಪನಹಳ್ಳಿ, ಫೆ.28- ಪಟ್ಟಣದ ಗೌರಿಹಳ್ಳಿ ರಸ್ತೆಯಲ್ಲಿರುವ ಶ್ರೀ ಮೈಲಾರ ಲಿಂಗೇಶ್ವರ ವರ್ಷದ ಭವಿಷ್ಯ ಕಾರ್ಣೀಕ `ಭಾಗ್ಯದ ನಿಧಿ ತುಂಬಿ ತುಳಕಿತಲೇ ಪರಾಕ್’ ಎಂದು ಗೊರವಪ್ಪ ನುಡಿದರು.
ಪ್ರತಿ ವರ್ಷ ಭರತಹುಣ್ಣಿಮೆಯಂದು ಸಂಜೆ ಕಾರ್ಣೀಕೋತ್ಸವ ಜರುಗುತ್ತದೆ. ವರ್ಷದಲ್ಲಿ ಎರಡು ಬಾರಿ ಕಾರ್ಣೀಕೋತ್ಸವ ಜರುಗಲಿದ್ದು, ದಸರಾ ಹಬ್ಬದಲ್ಲಿ ನುಡಿಯುವ ಕಾರ್ಣೀಕ ರಾಜಕೀಯಕ್ಕೆ ಹಾಗೂ ಭರತ ಹುಣ್ಣೆಮೆಯ ಕಾರ್ಣೀಕ ಬೆಳೆಗಳ ಮೇಲಿರುತ್ತದೆ ಎಂಬ ಪ್ರತೀತಿ ಇದೆ.
ಈ ವರ್ಷದ ಕಾರ್ಣೀಕ ಉತ್ತಮವಾಗಿದ್ದು ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಎಂದು ಹಿರಿಯರು ಮಾತನಾಡುತ್ತಿದ್ದಾರೆ. ಸರಪಳಿ ಪವಾಡ ಹಾಗೂ ಕಡುಬಿನ ಕಾಳಗವೂ ಸಹ ಗೊರವರಿಂದ ನಡೆಯುತ್ತಿದೆ ಎಂದು ದೇವಳ ಸಮಿತಿಯ ಧರ್ಮದರ್ಶಿ ಪಿ. ದತ್ತಾತ್ರೇಯ ರಾವ್ ತಿಳಿಸಿದರು.
ಈ ವೇಳೆ ವಂಶ ಪಾರಂಪಾರಿಕ ಧರ್ಮಕರ್ತರಾದ ನಾಗೇಶ್ವರರಾವ್, ಮಾರ್ತಾಂಡ್ ರಾವ್, ಪುರಸಭೆ ಸದಸ್ಯರಾದ ಕಿರಣ ಶಾನುಭೋಗ್ ಇನ್ನಿತರರಿದ್ದರು.