ದಾವಣಗೆರೆ,ಆ.10-ಎನ್.ಹೆಚ್. 48 ರಸ್ತೆಯ ಅಭಿಶ್ರೀ ಹೋಟೆಲ್ ಸಮೀಪದಲ್ಲಿ ಸುಮಾರು 25-35 ವರ್ಷದ ಅಪರಿಚಿತ ವ್ಯಕ್ತಿ ಶವ ಪತ್ತಯಾಗಿದೆ. ಮೃತನ ಹೆಸರು ರಾಮನಾಯ್ಕ ಎಂದು ಹೇಳಲಾಗಿದೆ. ಕೋಲು ಮುಖ, ಗುಂಗುರು ಕೂದಲು, ಗೋಧಿ ಮೈಬಣ್ಣ, ತೆಳ್ಳಗಿನ ಮೈಕಟ್ಟು, ಕಪ್ಪು ಕೂದಲು ಹೊಂದಿರುವ ಈತ ಬಿಳಿ ಟಿ ಶರ್ಟ್, ಹಸಿರು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಟಿ. ಶರ್ಟ್ ಮೇಲೆ ಸವಾಲ್ ಸೋಪ್ ಜಾಹೀರಾತು ಇರುವ ಚಿತ್ರ ಇರುತ್ತದೆ. ಈತ ಫಿಟ್ಸ್ ಬಂದು ಮೃತಪಟ್ಟಿರಬಹುದಾಗಿದ್ದು, ಸಂಬಂಧಪಟ್ಟವರು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ (ಫೋನ್ 08192-262555) ಯನ್ನು ಸಂಪರ್ಕಿಸಬಹುದು.
February 24, 2025