ಮಲೇಬೆನ್ನೂರು, ಏ.26- ಹಳ್ಳಿಹಾಳ್ ಗ್ರಾಮದ ಜೆಡಿಎಸ್ ಮುಖಂಡ ಹಾಗೂ ಶ್ರೀನಂದಿ ಸೌಹಾರ್ದ ಸಹಕಾರಿ ನಿರ್ದೇಶಕರೂ ಆದ ಹೆಚ್.ಟಿ. ಪರಮೇಶ್ವರಪ್ಪ ಅವರನ್ನು ಹರಿಹರ ತಾಲ್ಲೂಕು ಗ್ರಾಮಾಂತರ ಜೆಡಿಎಸ್ ಘಟಕದ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವರು ಭಾನುವಾರ ನೂತನ ಅಧ್ಯಕ್ಷರನ್ನು ಸನ್ಮಾನಿಸಿ, ಅಭಿನಂದಿಸಿದರು.
ಜಿ. ಬೇವಿನಹಳ್ಳಿಯ ಬಂಡೇರ ತಿಮ್ಮಣ್ಣ ಅವರು 2007 ರಿಂದ ಇಲ್ಲಿಯವರೆಗೆ ಸತತ 14 ವರ್ಷಗಳ ಕಾಲ ಹರಿಹರ ತಾ. ಗ್ರಾಮಾಂತರ ಜೆಡಿಎಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.