ದಾವಣಗೆರೆ, ಫೆ. 27 – ನಗರದ ಎಂ.ಸಿ.ಸಿ. `ಬಿ’ ಬ್ಲಾಕ್, ಮಾಮಾಸ್ ಜಾಯಿಂಟ್ ರಸ್ತೆಯ ಗಂಗೋತ್ರಿ ಕಾಂಪ್ಲೆಕ್ಸ್ನಲ್ಲಿ `ಸಂಭವ್ ಹೋಮ್ ಡೆಕೊರ್’ ಕಳೆದ ವಾರ ಪೂಜಾ ಸಮಾರಂಭದೊಂದಿಗೆ ಪ್ರಾರಂಭವಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿ, ಶುಭ ಹಾರೈಸಿದ ಹಿರಿಯ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ, ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಅವರುಗಳನ್ನು ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಲಾಯಿತು. ಅಂಗಡಿಯ ಮಾಲೀಕರಾದ ಚಿತ್ರದುರ್ಗದ ಶಾಂತಿಲಾಲ್ ಕೊಠಾರಿ, ಸಂಜಯ ಕೊಠಾರಿ, ಭಾವನಾ ಮೆಹ್ತಾ, ಚೇತನ ಗೆಮಾವತ್, ದಾವಣಗೆರೆಯ ಜಲ ಸಂಶೋಧಕ ಜಯಚಂದ್ ಪಿ. ಶೈನ್ ಮತ್ತಿತರರು ಅತಿಥಿ ಗಣ್ಯರನ್ನು ಸ್ವಾಗತಿಸಿ, ಬಿಳ್ಕೊಟ್ಟರು.
December 25, 2024