ದಾವಣಗೆರೆ, ಫೆ.27- ಅಪರಿಚಿತ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ನಗರದ ಹೈಸ್ಕೂಲ್ ಮೈದಾನದಲ್ಲಿ ಇಂದು ಮುಂಜಾನೆ ಮೃತನ ಶವ ಪತ್ತೆಯಾಗಿದೆ.
ಬೆಳಗಿನ ಜಾವ ಸುಮಾರು 2 ಗಂಟೆಗೆ ಹೈಸ್ಕೂಲ್ ಮೈದಾನದ ಮರಕ್ಕೆ ಸುಮಾರು 40 ವರ್ಷದ ಅಪರಿಚಿತ ವ್ಯಕ್ತಿಯು ಕೇಬಲ್ ವೈರ್ ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.
ಶವವನ್ನು ಸಿಜಿ ಆಸ್ಪತ್ರೆಯ ಶವಾಗಾರದಲ್ಲಿ ವಾರಸುದಾರರ ಪತ್ತೆಗಾಗಿ ಇಡಲಾಗಿದೆ. ಮೃತನ ಬಲಗೈ ತೋಳಿನಲ್ಲಿ ಆಂಜನೇಯ ಚಿತ್ರದ ಹಚ್ಚೆ ಗುರುತು ಇದ್ದು, ಬಲಗೈಯಲ್ಲಿ ಮಸಕಾಗಿ ಕಾಣುವ ಯಾವುದೋ ಚಿತ್ರದ ಹಚ್ಚೆ ಗುರುತು ಇದೆ. ಬಲಭುಜದಲ್ಲಿ ಕಪ್ಪು ಮಚ್ಚೆ ಇದೆ. ಮೃತನ ಕೊರಳಿನಲ್ಲಿ ಕಪ್ಪು ದಾರಕ್ಕೆ ಆಂಜನೇಯನ ಡಾಲರ್ ಇದೆ.
ಕೋಲು ಮುಖ, ಸುಮಾರು 5 ಅಡಿ ಎತ್ತರ ಇದ್ದು, ಎಣ್ಣೆಗೆಂಪು ಮೈ ಬಣ, ಸಾಧಾರಣ ಮೈಕಟ್ಟು ಹೊಂದಿದ ಚಹರೆಯುಳ್ಳವನಾಗಿದ್ದಾನೆಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.