ತುಂಗಭದ್ರಾ ನದಿ ತೀರದಲ್ಲಿ ಸಂಭ್ರಮದ `ತುಂಗಾರತಿ’

ತುಂಗಭದ್ರಾ ನದಿ ತೀರದಲ್ಲಿ ಸಂಭ್ರಮದ `ತುಂಗಾರತಿ’

ಕುಮಾರಪಟ್ಟಣಂ, ಫೆ.28- ಇಲ್ಲಿನ ತೆಪ್ಪೋತ್ಸವ ಪುಣ್ಯಕೋಟಿ ಮಠದ ವತಿಯಿಂದ 2ನೇ ಬಾರಿಗೆ ಹಮ್ಮಿಕೊಂಡಿದ್ದ `ತುಂಗಾರತಿ’ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು.

ಉತ್ತರ ಭಾರತದ ಐತಿಹಾಸಿಕ ಗಂಗಾನದಿ ತೀರದಲ್ಲಿ ಜರುಗುವ `ಗಂಗಾರತಿ’ ಮಾದರಿಯಲ್ಲಿ ತುಂಗಭದ್ರಾ ನದಿ ತೀರದಲ್ಲಿ ನಡೆದ `ತುಂಗಾರತಿ’ ನೋಡಲು ಜನ ನಾನಾ ಭಾಗಗಳಿಂದ ಆಗಮಿಸಿದ್ದರು.

`ತುಂಗಾರತಿ’ ಕಾರ್ಯಕ್ರಮ ಉದ್ಘಾಟಿಸಿದ ಆದಿಚುಂಚನಗಿರಿ ಮಠದ ಡಾ. ನಿರ್ಮಲಾ ನಂದ ಸ್ವಾಮೀಜಿ ಅವರು, ಪುಣ್ಯಕೋಟಿ ಮಠದ ಶ್ರೀಗಳು ಇಂತಹ ಅದ್ಭುತ ಕಾರ್ಯ ಕ್ರಮ ಏರ್ಪಡಿಸುವ ಮೂಲಕ ಗಂಗಾನದಿ ತೀರದಲ್ಲಿ ನಿತ್ಯ ನಡೆಯುವ ಗಂಗಾರತಿಯನ್ನು ಈ ತುಂಗಭದ್ರಾ ನದಿ ತೀರದಲ್ಲಿ ತುಂಗಾರತಿ ಮಾಡುವ ಮೂಲಕ ಈ ಭಾಗದ ಜನರಿಗೆ ಗಂಗಾರತಿಯ ಪರಿಕಲ್ಪನೆ ಮಾಡಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೇಶದ ಸಮೃದ್ಧಿಗೆ ನದಿಗಳು, ಪ್ರಕೃತಿ ಬಹಳ ಮುಖ್ಯವಾಗಿವೆ. ಅಂತಹ ನದಿಗಳನ್ನು, ಪ್ರಕೃತಿಯನ್ನು ನಾವು ಸ್ವಚ್ಛವಾಗಿ ಇಟ್ಟುಕೊಳ್ಳುವ ಮೂಲಕ ಪ್ರೀತಿಸಿ, ಪೂಜಿಸಬೇಕೆಂದ ಶ್ರೀಗಳು, ಹರಿಯುವ ನದಿಗಳು ಶುದ್ಧವಾಗಿದ್ದರೆ ದೇಶ ಶುದ್ಧವಾಗಿರುತ್ತದೆ. ದೇಹದ ಒಳಗೆ ಹರಿಯುವ ರಕ್ತ ಶುದ್ಧಿಯಾಗಿದ್ದರೆ ಆರೋಗ್ಯ ಚನ್ನಾಗಿರುತ್ತದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕೆಂದರು.

ತುಂಗಭದ್ರಾ ನದಿ ತೀರದಲ್ಲಿ ಸಂಭ್ರಮದ `ತುಂಗಾರತಿ' - Janathavani

ಆಧುನಿಕ ವಿಜ್ಞಾನಗಳ ಆವಿಷ್ಕಾರದಿಂದ ಜಗತ್ತು ವಿಕಾಸಗೊಳ್ಳುತ್ತಿದ್ದರೂ ಮನುಷ್ಯ ಕರ್ಮ, ಉಪಾಸನೆ, ಭಕ್ತಿ ಎಂಬ ವಿಚಾರಗಳಿಂದ ವಿಕಾಸಗೊಂಡಾಗ ಮಾತ್ರ ಅವನಲ್ಲಿ ಬದಲಾವಣೆ ಸಾಧ್ಯ. ಈ ನಿಟ್ಟಿನಲ್ಲಿ ಪುಣ್ಯಕೋಟಿ ಮಠದ ಶ್ರೀಗಳು ಕಾರ್ಯನಿರ್ವಹಿಸುತ್ತಿ ರುವುದು ತುಂಬಾ ಸಂತೋಷ ತಂದಿದೆ ಎಂದು ಆದಿಚುಂಚನಗಿರಿ ಶ್ರೀಗಳು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರಿಗೆ `ಕನ್ನಡದ ಕುಲಸಾರ್ವಭೌಮ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶ್ರೀಶೈಲ ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವ ಮೂರ್ತಿ ಚೆನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಮಠದ ಶ್ರೀ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಸ್ವಾಗತಿಸಿದರು. ಶಾಸಕ ಅರುಣ್‌ಕುಮಾರ್‌ ಪೂಜಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಚಿವ ರುದ್ರಪ್ಪ ಲಮಾಣಿ, ಮಾಜಿ ಶಾಸಕ ಬಿ.ಪಿ. ಹರೀಶ್‌, ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ವಿ.ಎಸ್‌. ಹಲಸೆ, ಹೋರಾಟಗಾರ ಡಿ.ಬಿ. ಹಿರೇಮಠ್‌, ಸಾಮಾಜಿಕ ಚಿಂತಕ ನಿಖಿತ್‌ರಾಜ್‌ ಮೌರ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್‌, ಚಂದ್ರಶೇಖರ್‌ ಪೂಜಾರ್‌, ಪ್ರಾಧ್ಯಾಪಕ ಡಾ. ಹೆಚ್‌. ವಿಶ್ವನಾಥ್‌, ಕರವೇ ಜಿಲ್ಲಾಧ್ಯಕ್ಷ ರಾಮೇಗೌಡ ಸೇರಿದಂತೆ ಇನ್ನೂ ಅನೇಕರು ವೇದಿಕೆಯಲ್ಲಿದ್ದರು.


ತುಂಗಭದ್ರಾ ನದಿ ತೀರದಲ್ಲಿ ಸಂಭ್ರಮದ `ತುಂಗಾರತಿ' - Janathavaniಜಿಗಳಿ ಪ್ರಕಾಶ್‌,
[email protected]

error: Content is protected !!