ಹರಪನಹಳ್ಳಿ, ಫೆ.24- ಕರ್ನಾಟಕ ರಾಜ್ಯ ಬಾಲ ವಿಕಾಸ ಅಕಾಡೆಮಿ ವತಿಯಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ 18 ವರ್ಷದೊಳಗಿನ ಮಕ್ಕಳಿಗೆ ನೀಡುವ 2021ನೇ ಸಾಲಿನ `ಬಾಲ ಗೌರವ ಪ್ರಶಸ್ತಿ’ಗೆ ಪಟ್ಟಣದ ವಿ.ವಿ.ಎಸ್ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕೆ.ವಿದ್ಯಾ ಆಯ್ಕೆಯಾಗಿದ್ದಾಳೆ.
ಕಲಬುರ್ಗಿ ವಿಭಾಗದ ಕ್ರೀಡಾ ಕ್ಷೇತ್ರದಿಂದ ಕೆ.ವಿದ್ಯಾ ಆಯ್ಕೆಯಾಗಿದ್ದು, ಇದೇ ದಿನಾಂಕ 28ರ ಭಾನುವಾರ ಧಾರವಾಡದಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿದ್ಯಾಗೆ `ಬಾಲಗೌರವ ಪ್ರಶಸ್ತಿ’, ನಾಮಫಲಕ ಹಾಗೂ 10 ಸಾವಿರ ರೂ. ನಗದು ಬಹುಮಾನವನ್ನು ನೀಡಿ ಗೌರವಿಸಲಾಗುತ್ತಿದೆ.
ಸ್ವತಃ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಿದ್ಯಾಳ ತಂದೆ ಕೆ.ತಿರುಪತಿ ಹಾಗೂ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಸಿ.ಮೊಹನ್ರೆಡ್ಡಿ, ಮುಖ್ಯೋಪಾಧ್ಯಾಯ ಎಂ.ಕೊಟ್ರಬಸಪ್ಪ ಮತ್ತು ಸಿಬ್ಬಂದಿ ವರ್ಗದವರು ವಿದ್ಯಾಳ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಕೋರಿದ್ದಾರೆ.