ವಿಜೃಂಭಣೆಯ ದಿಂಡಿ ಉತ್ಸವ

ಹೊನ್ನಾಳಿ, ಫೆ.24 – ಪಟ್ಟಣದ ದೊಡ್ಡಪೇಟೆಯ ಪಾಂಡುರಂಗ ದೇವಸ್ಥಾನದ 103 ನೇ ದಿಂಡಿ ಮಹೋತ್ಸವ, ಶ್ರೀ ವಿಠ್ಠಲ ರುಖುಮಾಯಿ ದೇವರ ರಥೋತ್ಸವ ರಾಜಬೀದಿಗಳಲ್ಲಿ ವಿವಿಧ ವಾದ್ಯಮೇಳಗಳೊಂದಿಗೆ ಬುಧವಾರ ಅದ್ದೂರಿಯಾಗಿ ನಡೆಯಿತು.

ದಿಂಡಿ ವಿಠ್ಠಲ ರುಖುಮಾಯಿ ದೇವರುಗಳಿಗೆ ವಿವಿಧ ಹೂವುಗಳಿಂದ ಅಲಂಕರಿಸಿ, ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ನಂತರ ರಥಕ್ಕೆ ಬಾಳೆಕಂಬ, ವಿವಿಧ ಹೂವುಗಳಿಂದ ಅಲಂಕರಿಸಿ, ರಥದಲ್ಲಿ ದೇವ ರನ್ನು ಪ್ರತಿಷ್ಠಾಪಿಸಿ ಭಕ್ತಿ ಮೆರೆದರು. ಸಿಂಪಿ ಸಮಾಜದ ಅಪಾರ ಭಕ್ತರು, ಮಹಿಳೆಯರು, ಯುವಕರು, ಪುರಾಣ ಪ್ರವಚಕರು ವಿವಿಧ ವಾದ್ಯಗಳೊಂದಿಗೆ ಪೇಟೆ ಬೀದಿ, ಕೆನರಾ ಬ್ಯಾಂಕ್ ರಸ್ತೆ, ತುಮ್ಮಿನಕಟ್ಟೆ ರಸ್ತೆ ಹಾಗೂ ತಾಲ್ಲೂಕು ಆಫೀಸ್ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. 103ನೇ ದಿಂಡಿ ವಿಠ್ಠಲ ರುಖು ಮಾಯಿ ದೇವರ ರಥೋತ್ಸವದ ಅಂಗವಾಗಿ ಜ್ಞಾನೇಶ್ವರಿ ಗ್ರಂಥ ಪೋತಿ ಸ್ಥಾಪನೆ ನಡೆದು, ಪ್ರತಿದಿನ ಜ್ಞಾನೇಶ್ವರಿ ಗ್ರಂಥದ ಪಾರಾಯಣ ನಡೆಸಿದರು. 

ದೇವಸ್ಥಾನ ಸಮಿತಿಯ ಅಧ್ಯಕ್ಷ ಎಸ್.ಎಂ. ನಾಗರಾಜ್ ಮೂಳೇಕರ್, ದಾವಣಗೆರೆ ವಿಶ್ವ ಹಿಂದೂ ಪರಿಷತ್‍ನ ಕೆ.ಬಿ. ಶಂಕರನಾರಾಯಣ, ಬೆಂಗಳೂರು ರಮೇಶ್, ಮಧು, ದುರ್ಗೋಜಿ, ಆರ್. ಮುರಳೀಧರ್, ಸೌಮ್ಯ, ಜಗನ್ನಾಥ ರಾವ್, ಪ್ರಹ್ಲಾದರಾವ್, ಸತ್ಯನಾರಾಯಣ್, ಪಾಂಡುರಂಗ ಮತ್ತಿತರರು ಭಾಗವಹಿಸಿದ್ದರು.

error: Content is protected !!