ದರ್ಗಾ ಕಾಣಿಕೆ ಹುಂಡಿಗೆ ಬೆಂಕಿ : ಕರಕಲಾದ ಲಕ್ಷಾಂತರ ರೂ.

ದಾವಣಗೆರೆ, ಫೆ.23- ಕಾಣಿಕೆ ಹುಂಡಿಗೆ ಬೆಂಕಿ ಬಿದ್ದು ಅದರಲ್ಲಿದ್ದ ಲಕ್ಷಾಂತರ ರೂ. ಮುಖ ಬೆಲೆಯ ನೋಟುಗಳು ಸುಟ್ಟು ಕರಕಲಾಗಿರುವ ಘಟನೆ ತಾಲ್ಲೂಕಿನ ದೊಡ್ಡಬಾತಿ ಗ್ರಾಮದ ದರ್ಗಾದಲ್ಲಿ ಸಂಭವಿಸಿದೆ. 

2 ಸಾವಿರ, 500, 200, 100 ಸೇರಿದಂತೆ ನೋಟುಗಳು ಸುಟ್ಟಿವೆ. ಹುಂಡಿಯಿಂದ ಬೆಂಕಿ ಬರುತ್ತಿರುವುದನ್ನು ಗಮನಿಸಿದ ದರ್ಗಾದ ಸಿಬ್ಬಂದಿ, ಭಕ್ತರು ನೀರು ಹಾಕಿ, ಬೆಂಕಿಯನ್ನು ನಂದಿಸಿದ್ದಾರೆ. ತಕ್ಷಣವೇ ವಕ್ಫ್ ಮಂಡಳಿ ಹಾಗೂ ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದೆ. 

ದರ್ಗಾ ಕಾಣಿಕೆ ಹುಂಡಿಗೆ ಬೆಂಕಿ : ಕರಕಲಾದ ಲಕ್ಷಾಂತರ ರೂ. - Janathavani

ಅಧಿಕಾರಿಗಳು ಹುಂಡಿಗೆ ಬೆಂಕಿ ಬಿದ್ದು ಅರೆಬರೆ ಸುಟ್ಟಿದ್ದ ನೋಟುಗ ಳನ್ನು ದರ್ಗಾ ಸಿಬ್ಬಂದಿ ಜೊತೆಗೂಡಿ ಬೇರ್ಪಡಿಸಿ, ಎಣಿಕೆ ಮಾಡುತ್ತಿದ್ದಾರೆ. ಸದ್ಯಕ್ಕೆ ಸುಟ್ಟು ಕರಕಲಾದ ನೋಟು ಗಳು, ಅರೆಬರೆ ಸುಟ್ಟ ನೋಟುಗಳನ್ನು, ನೀರಿನಿಂದಾಗಿ ತೊಯ್ದ ನೋಟುಗಳನ್ನು ಬೇರ್ಪಡಿಸಿ, ಎಣಿಕೆ ಮಾಡುವ ಕಾರ್ಯ ಸದ್ಯ ಸಾಗಿದೆ. 

ಈ ಸಂಬಂಧ ಸಿಸಿ ಕ್ಯಾಮರಾ ಪರಿಶೀಲಿಸಿರುವ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ತಹಶೀಲ್ದಾರ್ ಬಿ.ಎನ್. ಗಿರೀಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

error: Content is protected !!