ಸೀರೆ ಅಂಗಡಿಯಲ್ಲಿ ಕಳ್ಳತನ : ಇಬ್ಬರ ಬಂಧನ

ದಾವಣಗೆರೆ, ಜು.14- ಸೀರೆ ಅಂಗಡಿ ಯೊಂದರ ಕ್ಯಾಷ್ ಡ್ರಾನಲ್ಲಿದ್ದ   ನಗದು ದೋಚಿದ್ದ ಆರೋಪದಲ್ಲಿ ಕಾನೂನು ಸಂಘ ರ್ಷಕ್ಕೊಳಗಾದ ಬಾಲಕ ಸೇರಿ ಇಬ್ಬರನ್ನು ಇಲ್ಲಿನ ಬಸವನಗರ ಪೊಲೀಸರು ಬಂಧಿಸಿದ್ದಾರೆ.

ಹೊಂಡದ ವೃತ್ತದ ನವೀನ್ ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಸೆರೆ ಸಿಕ್ಕಿದ್ದಾನೆ. ಇದೇ ದಿನಾಂಕ 6ರಂದು ಮಧ್ಯಾಹ್ನದ ಸಮಯದಲ್ಲಿ ನಗರದ ಬಿ.ಟಿ. ಗಲ್ಲಿಯಲ್ಲಿರುವ ಮನೀಶ್ ಮೆಸ್ತಾ ಎಂಬುವರ ಸೀರೆ ಅಂಗಡಿಯಲ್ಲಿ ಕ್ಯಾಷ್ ಡ್ರಾದಲ್ಲಿದ್ದ 2 ಲಕ್ಷದ 50 ಸಾವಿರ ನಗದು ಕಳವು ಮಾಡಿದ್ದ ಬಗ್ಗೆ ಬಸವನಗರ ಠಾಣೆಗೆ ದೂರು ದಾಖಲಿಸಲಾಗಿತ್ತು.

ಈ ಬಗ್ಗೆ ತನಿಖೆ ಕೈಗೊಂಡ ಬಸವನಗರ ಪೊಲೀಸ್ ಠಾಣೆಯ ನಿರೀಕ್ಷಕ ನಾಗಪ್ಪ ಬಂಕಾಳಿ ನೇತೃತ್ವದಲ್ಲಿ ಪಿಎಸ್‌ಐ ಶೀಲಾ ಹೊಂಗಲ್, ಸಿಬ್ಬಂದಿಗಳಾದ ಫಕೃದ್ದೀನ್ ಅಲಿ, ವಿಶ್ವನಾಥ ಗಡ್ಡಿ, ಕೆ. ಗಣೇಶ್, ಅನುಸೂಯ ಒಳಗೊಂಡ ತಂಡ 13ರಂದು ಕಳ್ಳರನ್ನು ಬಂಧಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ 1 ಲಕ್ಷದ 90 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.

error: Content is protected !!