ಹರಪನಹಳ್ಳಿ, ಏ.23- ಕೋವಿಡ್ ಲಸಿಕೆ ಹಾಕಿಸಿ, ಹರಪನಹಳ್ಳಿ ಪಟ್ಟಣವನ್ನು ಕೋವಿಡ್ ಮುಕ್ತ ನಗರವನ್ನಾಗಿ ಮಾಡೋಣ ಎಂಬ ಸಂದೇಶದೊಂದಿಗೆ 13 ಕೇಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಹಾಕಲಾಯಿತು.
ಕೋವಿಡ್ ಎರಡನೇ ಅಲೆಯಿಂದ ದೇಶವೇ ತತ್ತರಿಸಿ ಹೋಗುತ್ತಿದೆ. ಈ ಮಹಾ ಮಾರಿಯನ್ನು ಹೊಡೆದೋಡಿಸಲು ಲಸಿಕೆ ತುಂಬಾ ಉಪಯುಕ್ತವಾಗಿದ್ದು, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ಪುರಸಭೆ ಕಾರ್ಯಾಲಯ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಛೇರಿಯಲ್ಲಿ ಇಂದು ಹರಪನಹಳ್ಳಿ ನಗರದಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಅಭಿಯಾನ ನಡೆಯಿತು.
ಸ.ಹಿ.ಪ್ರಾ. ಶಾಲೆ ಕುರುಬರಗೇರಿ, ಸ.ಹಿ. ಪ್ರ. ಶಾಲೆ ಕೆಳಗಿನ ಉಪ್ಪಾರಗೇರಿ, ಸ.ಹಿ.ಪ್ರ. ಶಾಲೆ ಮೇಗಳಪೇಟೆ, ಸ.ಹಿ.ಪ್ರ. ಶಾಲೆ ಇಸ್ಲಾಂಪುರ, ಸ.ಹಿ.ಪ್ರ.
ಶಾಲೆ ಬಾಪೂಜಿ ನಗರ, ಸ.ಹಿ.ಪ್ರ. ಶಾಲೆ ಆಶ್ರಯ ಬಡಾವಣೆ, ಸ.ಕಿ. ಪ್ರಾ. ಶಾಲೆ 9ನೇ ವಾರ್ಡ್, ಮೇನ್ ಸ್ಕೂಲ್ ಬಣಗೇರಿ, ಉರ್ದು ಹೈಸ್ಕೂಲ್
ಹಿಪ್ಪಿತೋಟ, ಉರ್ದು ಸ್ಕೂಲ್ ಗುಂಡಿಕೇರಿ, ನ್ಯಾಷನಲ್ ಸ್ಕೂಲ್ , ಉರ್ದು ಸ್ಕೂಲ್, ಸರ್ಕಾರಿ ಪದವಿ ಪೂರ್ವ ಕಾಲೇಜ್ ಹರಪನಹಳ್ಳಿ ಈ 13 ಕೇಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ಹಾಕಿಸುವ ಅಭಿಯಾನ ನಡೆಯಿತು.