ಪದವಿ ಶಿಕ್ಷಣ ನಾಲ್ಕು ವರ್ಷಕ್ಕೆ ಏರಿಕೆ ಖಂಡಿಸಿ ಪ್ರತಿಭಟನೆ

ದಾವಣಗೆರೆ, ಜು.13- ಎನ್ಇಪಿ ಅನುಷ್ಠಾನದ ಭಾಗವಾಗಿ ಪದವಿ ಶಿಕ್ಷ ಣವನ್ನು ಮೂರು ವರ್ಷದಿಂದ ನಾಲ್ಕು ವರ್ಷಕ್ಕೆ ಏರಿಸುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ  ಎಡ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ-ಕರ್ನಾಟಕ ನೇತೃತ್ವದಲ್ಲಿ ಇಂದು ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ್ದ ಸಂಘಟನೆಯ ಪದಾಧಿಕಾರಿಗಳು, ಹಾಗೂ ಭಾಷಾ ನೀತಿಯಲ್ಲಿ ಮಾತೃ ಭಾಷೆಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸುತ್ತಿರುವುದಕ್ಕೂ ಸಹ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಉಪವಿಭಾಗಾಧಿಕಾರಿ ಮುಖೇನ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.

ಮಾತೃ ಭಾಷಾ ಕಲಿಕೆಯನ್ನು ಒಂದು ವರ್ಷಕ್ಕೆ ಸೀಮಿತಿಗೊಳಿಸುವ ಪ್ರಯತ್ನವೂ ನಡೆಯುತ್ತಿದೆ. ಇದೆಲ್ಲ ವನ್ನೂ ರಾಜ್ಯ ಸರ್ಕಾರ ದೇಶದಲ್ಲಿ ನಾವೇ ಮೊದಲು ಜಾರಿ ಮಾಡುತ್ತೇವೆ ಎಂದು ಹೊರಟಿದೆ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದರು.

ಬೆಳೆಯುವ ಕುಡಿಗಳಲ್ಲಿ ಅಸಮಾನತೆಯನ್ನು ಬಿತ್ತುವ ಶಿಕ್ಷಣ ವ್ಯವಸ್ಥೆಯ ಬದಲಾಗಿ ಸಮಾನತೆ ಮತ್ತು ಸೌಹಾರ್ದತೆಯ ನಿರ್ಮಾಣಕ್ಕಾಗಿ ಸಮಾನ ಶಿಕ್ಷಣದ ಕೂಗು ಇದ್ದರೂ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ. ಇನ್ನು ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರ ಜಿಡಿಪಿಯ ಶೇ. 6ರಷ್ಟು ಅಥವಾ ರಾಜ್ಯ ಬಜೆಟ್ ನ ಶೇ. 24ರಷ್ಟು ಮೀಸಲಿಡಬೇಕೆಂದು ಶಿಕ್ಷಣ ಆಯೋಗಗಳು, ಶಿಕ್ಷಣ ತಜ್ಞರು ಶಿಫಾರಸ್ಸು ಮಾಡುತ್ತಿದ್ದಾರಲ್ಲದೆ, ಇವುಗಳಿ ಗಾಗಿ ಯಾವುದೇ ಸರ್ಕಾರಗಳಾಗಲೀ, ಸಚಿವರಾಗಲೀ ತುರ್ತು ಸಮಿತಿಗಳು ರಚಿಸಿ ವರದಿ ಕೇಳಲಿಲ್ಲ. ಅನುಷ್ಠಾನಕ್ಕೆ ಉತ್ಸುಕ ರಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ವಿಧಾನ ಮಂಡಲದಲ್ಲಿ ಎನ್.ಇ.ಪಿ -2020 ರ ಸಮಗ್ರ ಚರ್ಚೆ ಆಗಬೇಕು‌. ಮಾತೃ ಭಾಷಾ ಕನ್ನಡ ಕಲಿಕೆ ಎಲ್ಲಾ ಹಂತದಲ್ಲಿಯೂ ಇರಬೇಕು ಮತ್ತು ಮಾತೃ ಭಾಷೆಯಲ್ಲಿ ವ್ಯಾಸಂಗ ಮಾಡಿದವರಿಗೆ ಆದ್ಯತೆಯ ಮೇರೆಗೆ ಶಿಷ್ಯ ವೇತನ ಮತ್ತು ಉದ್ಯೋಗಾವ ಕಾಶಗಳನ್ನು ಸೃಷ್ಟಿ ಮಾಡುವ ನಿಟ್ಟಿನಲ್ಲಿ ನೀತಿಗಳನ್ನು ರೂಪಿಸಬೇಕು. ರಾಜ್ಯದ ಶಿಕ್ಷಣ ಹಕ್ಕುದಾರರೊಂದಿಗೆ (ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು ) ಎನ್.ಇ.ಪಿ 2020 ರ ಕುರಿತಂತೆ ಸಮಗ್ರವಾಗಿ ಚರ್ಚಿಸಬೇಕು, ಸಮಿತಿ ಯೊಂದಿಗೆ ನಡೆಯುವ ಚರ್ಚೆ ಮತ್ತು ವರದಿಗಳನ್ನು ಪಾರದರ್ಶಕವಾಗಿರಿಸ ಬೇಕು, ಅವುಗಳು ಎಲ್ಲರಿಗೂ ತಲುಪು ವಂತೆ ಕಾಲಕಾಲಕ್ಕೆ ಪ್ರಕಟಿಸಬೇಕು, ಈ ಎಲ್ಲಾ ವಿಷಯಗಳು ಬಗೆಹರೆಯ ವವರೆಗೂ ರಾಜ್ಯದಲ್ಲಿ ಎನ್.ಇ.ಪಿ 2020 ಅನ್ನು ಜಾರಿ ಮಾಡಬಾರದು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಐಎಸ್ ಎಫ್ ರಾಜ್ಯ ಕಾರ್ಯದರ್ಶಿ ಹೆಚ್. ರಮೇಶ್ ನಾಯ್ಕ, ಕೆವಿಎಸ್ ಜಿಲ್ಲಾ ಸಂಚಾಲಕ ಸತೀಶ್ ಅರವಿಂದ್, ಎಸ್ ಎಫ್ ಐ ಜಿಲ್ಲಾ ಸಂಚಾಲಕ ಲಕ್ಷ್ಮಣ ರಮಾವತ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ಡಿ.ಸಿ. ರಾಕೇಶ್ ಮತ್ತಿತರರು ಭಾಗವಹಿಸಿದ್ದರು.

error: Content is protected !!