ಬ್ಯಾಡ್ಮಿಂಟನ್‌ನಲ್ಲಿ ಬಿಎಸ್‌ಸಿ ಹಾಗೂ ಎವಿಕೆ ಕಾಲೇಜುಗಳಿಗೆ ಬಹುಮಾನ

ಹೊನ್ನಾಳಿ, ಫೆ.22- ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ತಾಲ್ಲೂಕು ಒಳಾಂಗಣ ಕ್ರೀಡಾಂಗಣದಲ್ಲಿ ದಾವಣಗೆರೆ ವಿವಿ ಅಂತರ ಕಾಲೇಜು ವಲಯಮಟ್ಟದ ಪುರುಷ ಮತ್ತು ಮಹಿಳೆಯರ ಬ್ಯಾಡ್ಮಿಂಟನ್ ಪಂದ್ಯಾವಳಿ ಇತ್ತೀಚೆಗೆ ನಡೆಯಿತು.

ಪುರುಷರ ವಿಭಾಗದಲ್ಲಿ ನಗರದ ಬಿಎಸ್‌ಸಿ ಕಾಲೇಜು ಪ್ರಥಮ ಸ್ಥಾನ ಹಾಗೂ ಮಹಿಳೆಯರ ವಿಭಾಗದಲ್ಲಿ ಎ.ವಿ. ಕಮಲಮ್ಮ ಕಾಲೇಜು ಪ್ರಥಮ ಸ್ಥಾನ ಗಳಿಸಿದೆ. ಕಾಲೇಜು ಪ್ರಾಂಶುಪಾಲ ಹೆಚ್. ಶಿವಬಸಪ್ಪ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಎಸ್.ಎ. ಹುಡೇದ್, ಗ್ರಾ.ಪಂ. ಸದಸ್ಯ ಬಲಮುರಿ ಎಂ. ಬಸವರಾಜ್, ದೈಹಿಕ ಶಿಕ್ಷಣ ನಿರ್ದೇಶಕ ಪಿ.ಎಸ್. ಹರೀಶ್, ಪತ್ರಕರ್ತ ಮೃತ್ಯುಂಜಯ ಪಾಟೀಲ್, ಕಾಲೇಜು ಸಿಬ್ಬಂದಿಗಳಾದ ಕೊಟ್ರೇಶ್, ಪಾಟೀಲ್, ಮಂಜುನಾಥ, ಗುರು ರಾಘವೇಂದ್ರ, ಮಹಾಬಲೇಶ್ವರ್, ವೀರೇಂದ್ರ, ಬ್ಯಾಡ್ಮಿಂಟನ್ ಗುತ್ತಿಗೆದಾರ ಕುಬೇರಪ್ಪ ಮತ್ತಿತರರು ಇದ್ದರು.

ಜಿಲ್ಲೆಯ 15 ಪುರುಷರ ತಂಡಗಳು ಹಾಗೂ 11 ಮಹಿಳಾ ಬ್ಯಾಡ್ಮಿಂಟನ್ ತಂಡಗಳು ಭಾಗವಹಿಸಿದ್ದವು. ಪುರುಷರ ವಿಭಾಗದಲ್ಲಿ ದ್ವಿತೀಯ ಆರ್.ಜಿ. ಕಾಲೇಜು, ತೃತೀಯ ಬಿಎಸ್‌ಸಿ ಕಾಲೇಜು ಹಾಗೂ ನಾಲ್ಕನೇ ಸ್ಥಾನವನ್ನು ದಾವಣಗೆರೆ ವಿವಿ ವಿದ್ಯಾರ್ಥಿಗಳು ಪಡೆದಿದ್ದಾರೆ.

error: Content is protected !!