ಮನೆಗಳ್ಳನ ಬಂಧನ : 3 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳ ವಶ

ದಾವಣಗೆರೆ, ಜು.12- ಮನೆಗಳ್ಳನೋರ್ವನನ್ನು ಬಂಧಿಸಿರುವ ಹೊನ್ನಾಳಿ ಪೊಲೀಸರು, ಎರಡು ಪ್ರಕರಣಗಳನ್ನು ಪತ್ತೆ ಮಾಡಿ, 3.25 ಲಕ್ಷ ರೂ. ಮೌಲ್ಯದ 73 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಹೊನ್ನಾಳಿ ತಾಲ್ಲೂಕು ದೊಡೇರಹಳ್ಳಿ ಗ್ರಾಮದ ಗೋಕುಲ್ (19) ಬಂಧಿತ ಆರೋಪಿ. ಹೊನ್ನಾಳಿ ತಾಲ್ಲೂಕು ಸೋಮನಮಲ್ಲಾಪುರ ಗ್ರಾಮದ ಲಂಕೇಶ ಅವರ ಮನೆಗೆ ಮೊನ್ನೆ 8ರ ಮಧ್ಯಾಹ್ನ ಕನ್ನ ಹಾಕಿರುವ ಬಂಧಿತ, ಬಂಗಾರದ ಮಾಂಗಲ್ಯ ಸರ, ಒಂದು ಜೊತೆ ಬಂಗಾರದ ಬೆಂಡೋಲೆಗ ಳನ್ನು ಕಳ್ಳತನ ಮಾಡಿದ್ದ. 

ಚನ್ನಗಿರಿ ಉಪ ವಿಭಾ ಗದ ಪೊಲೀಸ್ ಉಪಾ ಧೀಕ್ಷಕರ ಮಾರ್ಗದರ್ಶನ ದಲ್ಲಿ ಹೊನ್ನಾಳಿ ವ್ಯತ್ತ ನಿರೀಕ್ಷಕ ಟಿ.ವಿ. ದೇವರಾಜ್, ಠಾಣೆಯ ಪಿಎಸ್ಐ ಬಸವ ರಾಜ ಬಿರಾದಾರ, ಪ್ರೊಬೇಷ ನರಿ ಪಿಎಸ್ಐ ಕಾಂತರಾಜ್ ಮತ್ತು ಅಪರಾಧ ದಳದ ಸಿಬ್ಬಂದಿಗಳಾದ ಫೈರೋಜ್, ಮಲ್ಲೇಶ್, ಜಗದೀಶ್ ಒಳಗೊಂಡ ತಂಡವು ಆರೋಪಿಯನ್ನು ಪತ್ತೆ ಮಾಡಿದೆ. 

ಸೋಮನಮಲ್ಲಾಪುರ ಗ್ರಾಮದ ಲಂಕೇಶ್ ಹಾಗೂ ದೊಡ್ಡೇರಹಳ್ಳಿ ಗ್ರಾಮದ ಗದಿಗೆಪ್ಪನವರ ಮನೆಗಳಲ್ಲೂ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿರುವುದಾಗಿ ಬಂಧಿತನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ಬಂಧಿತನಿಂದ ಚಿನ್ನಾಭರಣ, ಒಂದು ಚಾಕು, ಬೈಕ್ ವಶಪಡಿಸಿಕೊಂಡಿದ್ದು, ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

error: Content is protected !!