ಹರಪನಹಳ್ಳಿ, ಏ.20- ತಾಲ್ಲೂಕಿನ ಕಂಚಿಕೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ವೈ. ಹನುಮಂತಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ಜೊಳ್ಳಿ ಕೆಂಚಪ್ಪ 3 ಮತಗಳನ್ನು ಪಡೆದು ಪರಾಜಿತ ರಾಗಿದ್ದು, ಒಂದು ಮತ ಅಸಿಂಧುವಾಗಿದೆ. ಕಾಂಗ್ರೆಸ್ ಬೆಂಬಲಿತ ಪೋತಲಕಟ್ಟಿ ಹಾಲೇಶಪ್ಪ 20 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಈಶ್ವರ ಪ್ರಸಾದ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಹೆಚ್.ರಾಜಪ್ಪ. ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷರುಗಳಾದ ಶಾಂತಕುಮಾರ ರೆಡ್ಡಿ, ಬಿದ್ರಿ ಕೊಟ್ರೇಶ್, ಮುಖಂಡರಾದ ಶ್ಯಾನಭೋಗರ ಪ್ರಸನ್ನಕುಮಾರ್, ಬಿದ್ರಿ ಸುನೀಲ್ ಕುಮಾರ್, ಎಂ.ಬಿ. ಅಂಜಿನಪ್ಪ, ಹಲಗೇರಿ ಮಂಜಣ್ಣ, ಕೆ.ಎಸ್. ಜಾತಪ್ಪ, ಈ.ವೆಂಕಟೇಶ್, ಹೆಚ್.ಹನುಮಂತಪ್ಪ, ತಳವಾರ ಕೆಂಚಣ್ಣ, ಮಡಿವಾಳರ ಮಂಜುನಾಥ್, ಚಲುವಾದಿ ಮಂಜಪ್ಪ, ಬಿ. ಮಾರುತಿ, ಹಳ್ಳಿಕೇರಿ ಕೊಟ್ರಯ್ಯ, ರೇವಣನಾಯ್ಕ, ಪಂಚಪ್ಪ, ಅಂಜಿನಪ್ಪ, ಮಹಂತೇಶ ನಾಯ್ಕ, ಹೊನ್ನೇನಳ್ಳಿ ಪರುಶುರಾಮ, ವೈ. ಗಣೇಶ್, ಭೀಮಣ್ಣ, ತಿರುಕಪ್ಪ, ನಾಗ ರಾಜ್, ಪಿಡಿಒ ಚಂದ್ರ ಶೇಖರ್, ಶ್ರೀನಿವಾಸ್ ಗುಂಡಗತ್ತಿ ಇನ್ನಿತರರಿದ್ದರು.