ಬಾಡಿಗೆ ಪಡೆದು ನಂಬಿಕೆ ದ್ರೋಹ
ದಾವಣಗೆರೆ, ಫೆ.22- ಬಾಡಿಗೆ ನೀಡುವುದಾಗಿ ನಂಬಿಸಿ, ಇಟಾಚಿ ವಾಹನಗಳನ್ನು ಬಾಡಿಗೆಗೆ ಪಡೆದು ನಂಬಿಕೆ ದ್ರೋಹವೆಸಗಿದ್ದ ಆರೋಪಿಯನ್ನು ಬಂಧಿಸಿ, ಮೂರು ಇಟಾಚಿ ವಾಹನಗಳನ್ನು ಜಗಳೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆ ತುರುವನೂರು ಗ್ರಾಮದ ಗುತ್ತಿಗೆದಾರ ಕೆ.ಎನ್. ಶ್ರೀನಿವಾಸರೆಡ್ಡಿ ಬಂಧಿತನು. ಬಂಧಿತನು ಆಂಧ್ರಪ್ರದೇಶ ವಿಜಯವಾಡದ ಬನಾವತ್ ವೆಂಕಟೇಶ್ ರಾವ್ ಎಂಬಾತನೊಂದಿಗೆ ಸೇರಿಕೊಂಡು ಜಗಳೂರು ತಾಲ್ಲೂಕಿನ
ಬಿದರಕೆರೆ ಗ್ರಾಮದ ಇ.ಎನ್. ಪ್ರಕಾಶ್ ಮತ್ತು ಈತನ ಸ್ನೇಹಿತ ಸೈಯದ್ ಸಾದತ್ ದರ್ವೇಜ್ ಎಂಬುವರಿಗೆ ಗುತ್ತಿಗೆ ಕೆಲಸಕ್ಕೆ ಇಟಾಚಿ ವಾಹನಗಳನ್ನು ಬಾಡಿಗೆಗೆ ನೀಡುವಂತೆ ನಂಬಿಸಿ ಅಗ್ರಿಮೆಂಟ್ ಮಾಡಿಕೊಳ್ಳದೇ 24 ಲಕ್ಷ ಬಾಡಿಗೆ ಹಣ ನೀಡದೇ ನಂಬಿಕೆ ದ್ರೋಹ ಮಾಡಿರುವುದಾಗಿ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಎಸ್ಪಿ ಹನುಮಂತರಾಯ, ಎಎಸ್ಪಿ ಎಂ. ರಾಜೀವ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ
ನೇತೃತ್ವದಲ್ಲಿ ಜಗಳೂರು ಸಿಪಿಐ ಡಿ. ದುರುಗಪ್ಪ ಹಾಗೂ ಜಗಳೂರು ಪೊಲೀಸ್ ಉಪನಿರೀಕ್ಷಕ ಸಂತೋಷ್ ಬಾಗೋಜಿ ಮತ್ತು ಸಿಬ್ಬಂದಿಗಳಾದ ಬಿ.ಜಿ. ತಿರುಮಲೇಶ್, ಆರ್. ನಾಗರಾಜ್, ರಾಜಪ್ಪ, ಪ್ರವೀಣ್ ಪಾಟೀಲ್, ಆರ್. ನಾಗಭೂಷಣ್, ಮಂಜಪ್ಪ, ನಾಗರಾಜ, ಜೋಯಿತ್ ರಾಜ್, ಎಸ್. ಗೋವಿಂದರಾಜ್, ರಾಮಚಂದ್ರ ಜಾದವ್, ರಘು,
ಉಮೇಶ್ ಬಿಸನಾಳ್, ಶಾಂತರಾಜ್ ಒಳಗೊಂಡ ತಂಡವು ಆರೋಪಿ ಶ್ರೀನಿವಾಸರೆಡ್ಡಿ ಪತ್ತೆ ಮಾಡಿ ಬಂಧಿಸಿದೆ.