ಐತಿಹಾಸಿಕ ಚಿತ್ರದುರ್ಗದಲ್ಲಿ ಶರಣ ಸಂಸ್ಕೃತಿ ಉತ್ಸವ

ಪುಷ್ಪಾಲಂಕೃತ ವಾಹನದಲ್ಲಿ ಮುರುಘಾ ಶರಣರ ಮೆರವಣಿಗೆ, ಉತ್ಸವದಲ್ಲಿ ಕಲಾ ತಂಡಗಳ ವೈಭವ, ಹರ್ಷೋದ್ಘಾರ

ಚಿತ್ರದುರ್ಗ, ಅ.15- ಐತಿಹಾಸಿಕ ನಗರ ಚಿತ್ರದುರ್ಗವು ಪ್ರತಿವರ್ಷದಂತೆ ಈ ವರ್ಷವೂ ಶರಣ ಸಂಸ್ಕೃತಿ ಉತ್ಸವ ಅನೇಕ ವಿಶೇಷತೆಗಳಿಗೆ ಸಾಕ್ಷಿಯಾಯಿತು.  

ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಅದ್ಧೂರಿ ಜನಪದ ಜಾತ್ರೆಯೇ ನಡೆ ಯಿತು. ಸಹಸ್ರಾರು ಭಕ್ತ ಸಮೂಹ ಈ ಸನ್ನಿವೇಶವನ್ನು ಕಣ್ತುಂಬಿಕೊಂಡರು.

ಮುರುಘಾ ಶರಣರು ಶ್ರೀ ಮುರುಗಿ ಶಾಂತವೀರ ಸ್ವಾಮಿಗಳ ಗದ್ದುಗೆಯ ದರ್ಶನ ಪಡೆದು ಶ್ರೀಮಠದ ಪ್ರಾಂಗಣದಲ್ಲಿ ಸಿಂಗರಿ ಸಿದ್ದ ಪುಷ್ಪಾಲಂಕೃತ ವಾಹನದ ಕಡೆ ಸಾಗಿ ನಾಡಿನ ನಾನಾ ಮಠಗಳ ಸ್ವಾಮಿಗಳು, ಬಸವ ಭಕ್ತರು, ಸಾರ್ವಜನಿಕರ ಹರ್ಷೋದ್ಘಾರಗಳ ನಡುವೆ  ವಾಹನವನ್ನು ಏರಿದರು. 

ಜನಪದ ಕಲಾಮೇಳಕ್ಕೆ ಕನಕ ಪುರ ಶ್ರೀ ಮರಳೇ ಗವಿಮಠದ ಡಾ. ಶ್ರೀ ಮುಮ್ಮಡಿ ಶಿವರುದ್ರ ಸ್ವಾಮಿಗಳು ಉತ್ಸವಕ್ಕೆ  ಚಮ್ಮಾಳ ಬಾರಿಸುವ ಮೂಲಕ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಶರಣ ಸಂಸ್ಕೃತಿ ಉತ್ಸವ 2021ರ ಗೌರವಾಧ್ಯಕ್ಷ ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತರುದ್ರೇಶ್ವರ ಸ್ವಾಮೀಜಿ, ವಿವಿಧ ಮಠಾಧೀಶರು ಹರ-ಗುರು-ಚರ ಮೂರ್ತಿಗಳು ಉಪಸ್ಥಿತರಿದ್ದರು. 

ನಂತರ ಉತ್ಸವ ಸಮಿತಿ ಸೇರಿದಂತೆ ನಾನಾ ಜಾತಿ, ಧರ್ಮಗಳ ಮುಖಂಡರು ಎಸ್.ಜೆ.ಎಂ. ಆಡಳಿತ ಮಂಡಳಿಯ ಸದಸ್ಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಶರಣ ರಿಗೆ ಗೌರವ ವಂದನೆ ಸಲ್ಲಿಸಿದರು. ನಂತರ ಜನತೆ ಮತ್ತು ಕಲಾತಂಡಗಳು ಮುಂಚೂಣಿಯಲ್ಲಿ  ಶ್ರೀಗಳ ಮೆರವಣಿಗೆಗೆ ಸಾಥ್ ನೀಡಿದರು.

ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ವಿವಿಧ ಪ್ರಕಾರದ ಜಾನಪದ ಕಲಾತಂಡಗಳು ತಮ್ಮದೇ ಆದ ವಿಶಿಷ್ಟ ಭಂಗಿಯ ಪ್ರದರ್ಶನ ನೀಡುತ್ತಾ ಸಾಗಿದ ದೃಶ್ಯ ಸುಮಾರು ಎರಡು ಕಿಲೋಮೀಟರ್‍ನಷ್ಟು ಉದ್ದ ಸಾಗಿತು. ಹಲವಾರು ತಂಡಗಳು ತಮ್ಮದೇ ಕಲೆ ಪ್ರದರ್ಶಿಸುತ್ತಾ ಸಾಗುತ್ತಿದ್ದ ದೃಶ್ಯವನ್ನು ರಸ್ತೆ ಬದಿಯಲ್ಲಿ, ಮನೆಯ ಮಹಡಿಗಳ ಮೇಲೆ ನಿಂತು ವೀಕ್ಷಿಸುತ್ತಿದ್ದ ಜನತೆಗೆ ಖುಷಿ ಕೊಟ್ಟಿತು.  

ಇದೇ ಸಂದರ್ಭದಲ್ಲಿ ಚಿತ್ರ ದುರ್ಗ ನಗರಸಭಾ ಅಧ್ಯಕ್ಷರಾದ ಶ್ರೀಮತಿ ತಿಪ್ಪಮ್ಮ ವೆಂಕಟೇಶ್‌ ಅವರು ಶ್ರೀಗಳಿಗೆ ಬೃಹತ್ ಹೂವಿನ ಹಾರವನ್ನು ಜೆ.ಸಿ.ಬಿ. ಮೂಲಕ ಹಾಕಿ ಭಕ್ತಿ ಸಮರ್ಪಿಸಿದರು.

ಶ್ರೀಗಳ ವಾಹನ ಗಾಂಧಿ ವೃತ್ತದ ಬಳಿ ಬಂದಾಗ ಹೆಲಿಕ್ಯಾಪ್ಟರ್‌ನಿಂದ ಪುಷ್ಪವೃಷ್ಟಿಯ ಮೂಲಕ ಶ್ರೀಗಳಿಗೆ ಗೌರವ ಸಲ್ಲಿಸಲಾಯಿತು. ನೆರೆದಿದ್ದ ಜನರು ಈ ಸನ್ನಿವೇಶವನ್ನು ಕಂಡು ಜೈಕಾರ ಹಾಕುತ್ತ ಸಂಭ್ರಮಿಸಿದರು.

ಮೇಳದಲ್ಲಿ ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಶ್ರೀ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹರ ಗುರು ಚರ ಮೂರ್ತಿಗಳು, ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ, ಶರಣ ಸಂಸ್ಕೃತಿ ಉತ್ಸವ 2021ರ ಕಾರ್ಯಾಾಧ್ಯಕ್ಷರಾದ ಕೆ.ಎಸ್.ನವೀನ್, ಪಟೇಲ್ ಶಿವಕುಮಾರ್, ಶಂಕರಮೂರ್ತಿ, ಎಸ್.ಜೆ.ಎಂ.ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ ಮುಂತಾದ ಗಣ್ಯರು ಭಾಗವಹಿಸಿ ಉತ್ಸವಕ್ಕೆ ಮೆರಗು ತಂದರು.

error: Content is protected !!