ದಾವಣಗೆರೆ, ಮೇ 8- ಕೊರೊನಾ ವೈರಸ್ನಿಂದ ಆರ್ಥಿಕ ಸಂಕಷ್ಟಕ್ಕೊಳಗಾದ ಮಡಿವಾಳ ಸಮುದಾಯಕ್ಕೆ ದಾವಣಗೆರೆ ಜಿಲ್ಲಾಡಳಿತದಿಂದ ನೀಡಿರುವ ಆಹಾರ ಧಾನ್ಯಗಳ ಕಿಟ್ಗಳನ್ನು ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಕಂದಾಯ ಇಲಾಕೆ ಅಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳ ಸಮ್ಮುಖದಲ್ಲಿ ವಿತರಿಸಲಾಯಿತು.
ಜಿಲ್ಲಾ ಮಡಿವಾಳ ಮಾಚಿದೇವ ಸಂಘ ಹಾಗೂ ಜಿಲ್ಲಾ ಮಡಿಕಟ್ಟೆ ಸಮಿತಿ ಸಹಯೋಗದಲ್ಲಿ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಜಿಲ್ಲಾಡಳಿತದ ನಿರ್ದೇಶನದಂತೆ ವಿನೋಬನಗರ ಮತ್ತು ನಿಟುವಳ್ಳಿಯಲ್ಲಿನ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಿತರಿಸಲಾಯಿತು.
ಜಿಲ್ಲಾ ಕಾರ್ಯಾಧ್ಯಕ್ಷ ಆವರಗೆರೆ ಹೆಚ್.ಜಿ. ಉಮೇಶ್, ಜಿಲ್ಲಾಧ್ಯಕ್ಷ ಎಂ. ನಾಗೇಂದ್ರಪ್ಪ, ಮಾಧ್ಯಮ ಸಲಹೆಗಾರ ಎಂ.ವೈ. ಸತೀಶ್, ಪತ್ರಕರ್ತರಾದ ಎನ್. ಪ್ರಮೋದ್ ಕುಮಾರ್, ಹೊಸ ಕುಂದವಾಡ ಅಣ್ಣಪ್ಪ, ಮಡಿಕಟ್ಟೆ ಸಮಿತಿ ಅಧ್ಯಕ್ಷ ಅಡಿವೆಪ್ಪ, ಕಾರ್ಯದರ್ಶಿ ಆರ್.ಎಂ. ರವಿ, ಸಿದ್ದೇಶ್, ಜಗದೀಶ್, ಬಸವರಾಜ್, ಪರಶುರಾಮ, ಅಣ್ಣಪ್ಪ, ಜಿಲ್ಲಾ ಸಂಘದ ಖಜಾಂಚಿ ಕೋಗುಂಡೆ ಸುರೇಶ್, ಉಪಾಧ್ಯಕ್ಷ ಪಿ. ಮಂಜುನಾಥ್, ಸಹ ಕಾರ್ಯದರ್ಶಿ ಆರ್.ಎನ್. ಧನಂಜಯ, ಡೈಮಂಡ್ ಮಂಜುನಾಥ್ ಹಾಗೂ ಸುಭಾಷ್ ಮಡಿವಾಳ ಇನ್ನಿತರರಿದ್ದರು.