ದಾವಣಗೆರೆ, ಏ.25- ನಾವು ಭಾರತೀಯರು ದಾವಣಗೆರೆ ಸಂಘದಿಂದ 26ನೇ ದಿನವೂ ಆಹಾರ ವಿತರಿಸಲಾಯಿತು.
ನಗರದ ಕರೂರು ಇಂಡಸ್ಟ್ರಿಯಲ್ ಏರಿಯಾ, ದೇವರಾಜ್ ಲೇಔಟ್, ಪೂಜಾ ಹೋಟೆಲ್ ಹಿಂಭಾಗದ ಅಲೆಮಾರಿ ಜನಾಂಗ, ಪಿ.ಬಿ. ರಸ್ತೆಯಲ್ಲಿರುವ ವಿನಾಯಕ ನಗರದ ಬಡವರು ಮತ್ತು ಹೊರ ರಾಜ್ಯದ ಕಾರ್ಮಿಕರಿಗೆ ಹಾಲು, ಬಿಸ್ಕೆಟ್ ಮತ್ತು ಊಟದ ಪ್ಯಾಕೆಟ್ ವಿತರಿಸಲಾಯಿತು. ದಾನಿಗಳಾದ ಟಿ. ಅಸ್ಗರ್, ಇಬ್ರಾಹಿಂ ಖಲೀಲ್, ಲಿಯಾಖತ್ ಅಲಿ, ನ್ಯಾಯವಾದಿ ನಜೀರ್, ಅಬ್ದುಲ್ ಘನಿ, ಜಘು, ಇಸ್ಮಾಯಿಲ್, ಇಮ್ರಾನ್ ಹಾಗು ಇನ್ನಿತರರಿದ್ದರು.
January 13, 2025