ರಸ್ತೆ ಅಭಿವೃದ್ಧಿಗೆ ರವೀಂದ್ರನಾಥ್ ಚಾಲನೆ

ದಾವಣಗೆರೆ, ಅ.11- ಮಹಾನಗರ ಪಾಲಿಕೆಯ 23 ಮತ್ತು 32ನೇ  ವಾರ್ಡುಗಳಲ್ಲಿ ಪಾಲಿಕೆ ವತಿಯಿಂದ ಕೈಗೆತ್ತಿಕೊಳ್ಳ ಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್.ಎ. ರವೀಂದ್ರನಾಥ್, ಮೇಯರ್ ಎಸ್.ಟಿ.ವೀರೇಶ್ ಅವರುಗಳು ಇಂದು ಭೂಮಿ ಪೂಜೆ ನೆರವೇರಿಸಿದರು.

23ನೇ ವಾರ್ಡ್ :  ಈ ವಾರ್ಡಿನಲ್ಲಿ ಶಾಸಕರ ವಿಶೇಷ ಅನುದಾನದಡಿಯಲ್ಲಿ ಹಾಗೂ ನಗರ ಪಾಲಿಕೆ ಸಾಮಾನ್ಯ ನಿಧಿಯಲ್ಲಿ ಎಸ್.ಎಸ್. ಬಡಾವಣೆ ಎ ಬ್ಲಾಕ್, ಕರ್ನಾಟಕ ಬ್ಯಾಂಕ್ ನಿಂದ ಎಸಿಬಿ ಕಚೇರಿವರೆಗೆ ಅಂದಾಜು 61.83 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಸಿಕ್ಕಿತು.

280 ಮೀಟರ್ ಕಾಂಕ್ರೀಟ್ ರಸ್ತೆ, 590 ಮೀಟರ್ ಡಾಂಬರ್ ರಸ್ತೆ, 250 ಮೀಟರ್ ಒಳ ಚರಂಡಿ ನಿರ್ಮಾಣ, 140 ಮೀಟರ್ ಮಳೆನೀರು ಚರಂಡಿ ನಿರ್ಮಾಣ ಕಾಮಗಾರಿ ನಡೆಯ ಲಿದ್ದು, 1ನೇ ದರ್ಜೆ ಗುತ್ತಿಗೆದಾರ ಸುರೇಶ್ ಬಾಬು ಎಂಬುವರಿಗೆ ಕಾಮಗಾರಿಗಳ ಗುತ್ತಿಗೆ ನೀಡಲಾಗಿದೆ.

23ನೇ ವಾರ್ಡಿನ ಪಾಲಿಕೆ ಸದಸ್ಯರಾದ ಶ್ರೀಮತಿ ರೇಖಾ ಸುರೇಶ್ ಗಂಡಗಾಳೆ ಮತ್ತು ಬಿಜೆಪಿ ಮುಖಂಡ ಸುರೇಶ್ ಗಂಡಗಾಳೆ ದಂಪತಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು. 

32ನೇ ವಾರ್ಡ್ : ಈ ವಾರ್ಡ್ ನಲ್ಲಿ ರಾಜ್ಯ ಸರ್ಕಾರದ ಎಸ್ ಎಫ್ ಸಿ ವಿಶೇಷ ಅನುದಾನದಲ್ಲಿ ಭಗೀರಥ ವೃತ್ತದಿಂದ ಶಕ್ತಿನಗರ 2ನೇ ಹಂತ, ಎಸಿ-ಎಸ್ಟಿ ವಿದ್ಯಾರ್ಥಿ ನಿಲಯದವರೆಗೆ 100 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ.

32ನೇ ವಾರ್ಡಿನ ಪಾಲಿಕೆ ಸದಸ್ಯರೂ ಆಗಿರುವ  ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಉಮಾ ಪ್ರಕಾಶ್ ಮತ್ತು ವಕೀಲ ಎ.ವೈ. ಪ್ರಕಾಶ್ ದಂಪತಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಉಪ ಮೇಯರ್ ಹೆಚ್.ಆರ್. ಶಿಲ್ಪಾ, ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್,    ಸ್ಥಾಯಿ ಸಮಿತಿ ಅಧ್ಯರುಗಳಾದ ಎಲ್.ಡಿ. ಗೋಣೆಪ್ಪ, ರೇಣುಕಾ ಶ್ರೀನಿವಾಸ್, ಗೀತಾ ದಿಳ್ಯೆಪ್ಪ, ಉಮಾ ಪ್ರಕಾಶ್, ಜಯಮ್ಮ ಗೋಪಿನಾಯಕ್, ಗೌರಮ್ಮ ಗಿರೀಶ್, ಮಾಜಿ ಉಪಮೇಯರ್ ಸೌಮ್ಯ ನರೇಂದ್ರಕುಮಾರ್, ಪಾಲಿಕೆ ನಾಮನಿರ್ದೇಶಿತ ಸದಸ್ಯ ಶಿವನಗೌಡ ಪಾಟೀಲ್, ಬಿಜೆಪಿ ಮುಖಂಡ ನರೇಂದ್ರಕುಮಾರ್ ಸೇರಿದಂತೆ ಇತರರು ಇದ್ದರು.

error: Content is protected !!