ನಗರಕ್ಕಾಗಮಿಸಿದ ನಾಗರಾಜ್ ಕಲಗುಟಕರ್ ಪಾದಯಾತ್ರೆ

ದಾವಣಗೆರೆ, ಜು.10- ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿ ರುವ ರೈತರ ಚಳುವಳಿಯಲ್ಲಿ ಪಾಲ್ಗೊ ಳ್ಳಲು ರಾಜ್ಯದ ಗಡಿಭಾಗ ಚಾಮರಾಜ ನಗರ ಜಿಲ್ಲೆಯಿಂದ ಪಾದಯಾತ್ರೆ ಕೈಗೊಂಡಿರುವ ನಾಗರಾಜ್ ಕಲಗು ಟಕರ್ ದಾವಣಗೆರೆಗೆ ಆಗಮಿಸಿದರು. ಈ ವೇಳೆ ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಅವರನ್ನು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸ್ವಾಗತಿಸಿದರು.

ಇದೇ ವೇಳೆ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲೆ ಹಾಕಿದ ನಂತರ ಬಹಿರಂಗ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ನಾಗರಾಜ್, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದಲ್ಲಿ ಆಡಳಿತ ನಡೆಸಿದ ಯಾವುದೇ ಸರ್ಕಾರಗಳು ಇಷ್ಟೊಂದು ಕ್ರೂರವಾಗಿರಲಿಲ್ಲ. ರೈತ ವಿರೋಧಿ ಕಾನೂನುಗಳನ್ನು ತರುವುದ ಲ್ಲದೇ, ಅವರ ಹೋರಾಟವನ್ನು ಹತ್ತಿಕ್ಕಲು ದೇಶವು ಈವರೆಗೆ ಕಂಡರಿಯದಂತಹ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ಮಾಡಿದೆ. ಇದು ರೈತರ ದನಿಗಳನ್ನು ದಮನ ಮಾಡುವ ಹುನ್ನಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಫೆಬ್ರವರಿ 11ರಿಂದ ಆರಂಭಗೊಂಡಿರುವ ಪಾದಯಾತ್ರೆ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ದೆಹಲಿಗೆ ತಲುಪಬೇಕಿತ್ತು. ಆದರೆ, ವಿವಿಧ ಜಿಲ್ಲೆಗಳಲ್ಲಿ ಪಾದಯಾತ್ರೆ ಮುಗಿಸಿ ಚಿತ್ರದುರ್ಗಕ್ಕೆ ಬಂದ ಸಮಯದಲ್ಲಿ ರಾಜ್ಯದಲ್ಲಿ ಲಾಕ್‍ಡೌನ್ ಆರಂಭಗೊಂಡ ಹಿನ್ನೆಲೆಯಲ್ಲಿ 2 ತಿಂಗಳು ವಿಳಂಬವಾಗಿದೆ. ಕಾರಣ ಪಾದಯಾತ್ರೆಯು  ನವೆಂಬರ್ 16ರಂದು ದೆಹಲಿ ತಲುಪಲಿದೆ ಎಂದು ತಿಳಿಸಿದರು.

ಹಿರಿಯ ನ್ಯಾಯವಾದಿ ಎಲ್.ಹೆಚ್. ಅರುಣ್‍ಕುಮಾರ್, ಹಿರಿಯ ನ್ಯಾಯವಾದಿ ಅನೀಷ್‍ಪಾಷಾ ಮಾತನಾಡಿದರು. 

ಈ ವೇಳೆ ಹೆಚ್.ಸಿ. ಗುಡ್ಡಪ್ಪ, ಕರಿಬಸಪ್ಪ, ಶ್ರೀನಿವಾಸ್, ಆನಂದ ರಾಜ್, ಶ್ರೀನಿವಾಸಮೂರ್ತಿ, ಅಣ್ಣಪ್ಪ, ರಂಗನಾಥ್, ಸತೀಶ್ ಅರವಿಂದ್, ಆವರಗೆರೆ ಚಂದ್ರು ಸೇರಿದಂತೆ ಇತರರು ಇದ್ದರು.

error: Content is protected !!