ದಾವಣಗೆರೆ, ಏ. 21- ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ (ರಿ.) ಹಾಗೂ ದಿ. ಲಿಂಗರಾಜ್ ಸ್ನೇಹಿತರ ಬಹಳಗದ ವತಿಯಿಂದ ಜಯದೇವ ವೃತ್ತದಲ್ಲಿ ದಿನಪತ್ರಿಕೆ ವಿತರಣೆ ಮಾಡುವ ಯುವಕರಿಗೆ ಆಹಾರ ಧಾನ್ಯಗಳ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ವಿ. ಶಿವಕುಮಾರ್, ಆರ್. ನಿಜಲಿಂಗಪ್ಪ, ಎ. ಶಿವಕುಮಾರ್ ಮತ್ತು ಕರಾಟೆ ಇ. ಮಹ್ಮದ್ ಸಾಧಿಕ್ ಹಾಗೂ ಪತ್ರಿಕಾ ವಿತರಕ ಕೃಷ್ಣಮೂರ್ತಿ ಮತ್ತು ಸೋಷಿಯಲ್ ವರ್ಕರ್ ಸಂತೋಷ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
January 13, 2025