17ನೇ ವಾರ್ಡ್‍ನಲ್ಲಿ 2 ಕೋಟಿ, 22ನೇ ವಾರ್ಡ್‍ನಲ್ಲಿ 90 ಲಕ್ಷ ವೆಚ್ಚದ ಕಾಮಗಾರಿ
ದಾವಣಗೆರೆ, ಅ.10- ಮಹಾನಗರ ಪಾಲಿಕೆ ವ್ಯಾಪ್ತಿಯ 17 ಮತ್ತು 22ನೇ ವಾರ್ಡ್‍ಗಳಲ್ಲಿ ಒಟ್ಟು 2.90 ಕೋಟಿ ರೂ.ಗಳ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಚಾಲನೆ ದೊರಕಿತು.
17ನೇ ವಾರ್ಡ್ : ಈ ವಾರ್ಡಿನ ಪಿ.ಜೆ. ಬಡಾವಣೆ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತರ ವಿಶೇಷ ಅನುದಾನದಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೇಂಟ್ ಪಾಲ್ಸ್ ಕಾನ್ವೆಂಟ್ ರಸ್ತೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್ ಸೇರಿದಂತೆ ಇತರರು ಭೂಮಿ ಪೂಜೆ ನೆರವೇರಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಜಿಲ್ಲಾ ಪಂಚಾಯತ್‌ನ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಅಂದಾಜು 200 ಲಕ್ಷ ವೆಚ್ಚದ ಕಾಮಗಾರಿ ಇದಾಗಿದ್ದು, ಈ ಪೈಕಿ 60 ಲಕ್ಷ ವೆಚ್ಚದಲ್ಲಿ 350 ರಿಂದ 400 ಮೀಟರ್ ನಷ್ಟು ಸಿಸಿ ರಸ್ತೆ ನಿರ್ಮಾಣ, 60 ಲಕ್ಷ ವೆಚ್ಚದಲ್ಲಿ 400 ಮೀಟರ್ ಸಿಸಿ ಡ್ರೈನ್ ನಿರ್ಮಾಣ, ಇನ್ನುಳಿದ ಹಣದಲ್ಲಿ ಫ್ಲೇವರ್ಸ್ ನಿರ್ಮಾಣ ಮಾಡ ಲಾಗುವುದು. ವಾರ್ಡಿನ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿಪಡಿಸುವುದಾಗಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ ಹೆಚ್. ವೆಂಕಟೇಶ್ `ಜನತಾವಾಣಿ’ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮೇಯರ್ ಎಸ್.ಟಿ. ವೀರೇಶ್, ಮಾಜಿ ಮೇಯರ್ ಸಹ ಆಗಿರುವ ವಾರ್ಡಿನ ಪಾಲಿಕೆ ಸದಸ್ಯ ಬಿ.ಜಿ. ಅಜಯ್ ಕುಮಾರ್, ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಬಿಜೆಪಿ ಮುಖಂಡರುಗಳಾದ ಗೋಪಾಲ್ ರಾವ್ ಸಾವಂತ್, ರಾಜು ಅಳಗೋಡಿ, ನಾಗರಾಜ್ ರಾವ್ ಪಿಸಾಳೆ ಮತ್ತು ಇತರರು ಉಪಸ್ಥಿತರಿದ್ದರು.
22ನೇ ವಾರ್ಡ್ : ಈ ವಾರ್ಡಿನ ಯಲ್ಲಮ್ಮ ನಗರ 7ನೇ ಕ್ರಾಸ್‌ನಿಂದ ಬನ್ನಿ ಮಂಟಪದವರೆಗೆ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್ ಸೇರಿದಂತೆ ಇತರರು ಭೂಮಿ ಪೂಜೆ ನೆರವೇರಿಸಿದರು.
ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 90 ಲಕ್ಷ ವೆಚ್ಚದ ಕಾಮಗಾರಿ ಇದಾಗಿದ್ದು, ಈ ಪೈಕಿ 720 ಮೀಟರ್ ನಷ್ಟು 43.37 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, 668 ಮೀಟರ್ ನಷ್ಟು 37.52 ಲಕ್ಷ ವೆಚ್ಚದಲ್ಲಿ ಸಿಸಿ ಡ್ರೈನ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈ ಕಾಮಗಾರಿಗಾಗಿ ಪಾಲಿಕೆಯಿಂದ ಉದಯ್ ಶಿವಕುಮಾರ್ ಅವರಿಗೆ ಗುತ್ತಿಗೆ ನೀಡಲಾಗಿದೆ ಎಂದು ಪಾಲಿಕೆ ಇಂಜಿನಿಯರ್ ಜಯಲಕ್ಷ್ಮಿ ತಿಳಿಸಿದರು.
ಈ ಸಂದರ್ಭದಲ್ಲಿ ಮೇಯರ್ ಎಸ್.ಟಿ. ವೀರೇಶ್, ಉಪ ಮೇಯರ್ ಶಿಲ್ಪಾ ಜಯಪ್ರಕಾಶ್, ಮಾಜಿ ಮೇಯರ್, ವಾರ್ಡಿನ ಪಾಲಿಕೆ ಸದಸ್ಯ ಬಿ.ಜಿ. ಅಜಯ್‌ಕುಮಾರ್, ವಾರ್ಡಿನ ಪಾಲಿಕೆ ಸದಸ್ಯ ಆರ್. ಶಿವಾನಂದ್, ಪಾಲಿಕೆ ಸದಸ್ಯರುಗಳಾದ ಪ್ರಸನ್ನ ಕುಮಾರ್, ವೀಣಾ ನಂಜಪ್ಪ, ಗೌರಮ್ಮ ಗಿರೀಶ್, ಶಿವನಗೌಡ ಪಾಟೀಲ್, ವೀರೇಶ್ ಪೈಲ್ವಾನ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಎಲ್.ಡಿ. ಗೋಣೆಪ್ಪ, ರೇಣುಕಾ ಶ್ರೀನಿವಾಸ್, ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ, ಅಡಾಣಿ ಸಿದ್ದಪ್ಪ, ಗಾಯತ್ರಮ್ಮ, ಬಿಜೆಪಿ ಮುಖಂಡರುಗಳಾದ ಸಂಗನಗೌಡ್ರು, ಬಿ. ಗುಡ್ಡಪ್ಪ, ಹನುಮಂತರಾವ್ ಸುರ್ವೆ, ಗಣೇಶ್ ರಾವ್, ರುದ್ರೇಶ್, ಕಾಂತೇಶ್, ಸಂಕನಗೌಡ್ರು, ಕೆ. ರಾಜೇಶ್, ತಿಪ್ಪೇಶ್, ಮಂಜುನಾಥ ಸಂಗೀತ್, ಎಂ. ರೂಪ, ಡಿ.ಎಂ. ಕಾಂತರಾಜ್, ಲಕ್ಷ್ಮೀಕಾಂತ್, ರಾಜು ಶಾಮನೂರು, ಅಡಾಣಿ ಸಿದ್ದಣ್ಣ ಸೇರಿದಂತೆ ವಾರ್ಡಿನ ಪ್ರಮುಖರು ಇದ್ದರು.