ಹಳೇ ಊರಿನ ಭಾಗದಲ್ಲಿದ್ದ ಮೇಲ್ಸೇತುವೆ ಮರು ನಿರ್ಮಿಸಿ ಕೊಡಿ

ಮಾನ್ಯರೇ,

ದಾವಣಗೆರೆ ನಗರದಲ್ಲಿ ರೈಲ್ವೇ ನಿಲ್ದಾಣ ಮರು ನಿರ್ಮಾ ಣವಾಗು ತ್ತಿದ್ದು ಕಾಮಗಾರಿಯು ವೇಗವಾಗಿ ನಡೆಯುತ್ತಿರುವುದು ಸಂತಸದಾಯಕ ವಿಚಾರವಾಗಿದೆ. 

ನಗರದ ಹಳೆಯ ಭಾಗ ದಲ್ಲಿ ಇರುವ ಸಾರ್ವಜನಿಕರು ಹೊಸ ಭಾಗದ ಕಡೆಗೆ ಹೋ ಗಲು ಇದ್ದಂತಹ ಮೇಲ್ಸೇತುವೆ ಯನ್ನು ಕೆಡವಿ ಹಾಕಿದ್ದು, ಅದರ ಬದಲಿಗೆ ನಿಲ್ದಾಣದ ಬೇರೆ ಸ್ಥಳದಲ್ಲಿ ನಿರ್ಮಿಸಲಾಗಿದೆ. ಆದರೆ ಜನರಿಗೆ ಅಂಚೆ ಕಚೇರಿ ಯ ಮುಂದಿರುವ ರಸ್ತೆಯಿಂದ ಮಹಾನಗರ ಪಾಲಿಕೆ ಕಡೆಗೆ ಹೋಗಲು ಇದ್ದಂತಹ ದಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.

ಮಳೆಗಾಲದ ದಿನಗಳಲ್ಲಿ ಇಲ್ಲೇ ಇರುವ ಅಂಡರ್ ಪಾಸ್ ದಾರಿಯಲ್ಲಿ ಮಳೆ ನೀರು ನಿಂತು ವಾಹನಗಳೇ ಚಲಿಸಲು ಸಾಧ್ಯವಾಗದಷ್ಟು ಉಪದ್ರವ ಪ್ರತಿ ವರ್ಷವೂ ಇದ್ದದ್ದೇ. ಹೀಗಿರುವಾಗ ಜನರಿಗೆ ನಡೆದುಕೊಂಡು ಹೋಗುವ ವಿಚಾರವೇ ಇಲ್ಲ. 

ಅಂಚೆ ಕಚೇರಿಯ ಮುಂದೆ ಇರುವ ದಾರಿಯಿಂದ ಹೋಗಲು ಇದ್ದ ವ್ಯವಸ್ಥೆಯನ್ನು ಹಳೆಯ ರೀತಿಯ ಲ್ಲಿದ್ದಂತೆ ಮಾಡಿಕೊಡಬೇಕು. ಹಾಗೂ ಹಳೆಯ ರೀತಿಯಲ್ಲಿದ್ದ ಮೇಲ್ಸೇತುವೆಯನ್ನು ಮರು ನಿರ್ಮಿಸಿ ಸಾರ್ವಜನಿಕರಿಗೆ ನಡೆದುಕೊಂಡು ಹೋ ಗಲು ಸುಲಭ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಸಂಬಂ ಧಪಟ್ಟಂತಹ ಅಧಿಕಾರಿಗಳಲ್ಲಿ ಮತ್ತು ಪ್ರಮು ಖರಲ್ಲಿ ಸಾರ್ವಜನಿಕರ ಪರವಾಗಿ ವಿನಮ್ರ ಕೋರಿಕೆ.


– ವೈ. ವಾದಿರಾಜ ಭಟ್ (ಆದಿಪ್ರಿಯ), – ವಕೀಲರು, ಎಸ್.ಪಿ.ಎಸ್. ನಗರ.

error: Content is protected !!