ಕೊರೊನಾ ಜೊತೆಗೆ ಬದುಕುವುದು ಕಲಿಯೋಣ….

ಮಾನ್ಯರೇ,

ಜಗತ್ತನ್ನೇ ಅಲ್ಲೋಲಕಲ್ಲೋಲ ಮಾಡಿ ಯಾರ ಕೈಗೂ ಸಿಗದೆ ದಿನಕ್ಕೆ ಒಂದೊಂದು ರೂಪ ತಾಳಿ ಜಗತ್ತಿನಾ ದ್ಯಂತ ಓಡಾಡುತ್ತಿರುವ ಈ ಕೊರೊನಾ ಮನುಕುಲದ ಜೀವನವನ್ನು ಅಸ್ತವ್ಯಸ್ತ ಮಾಡಿದೆ. ಇದರಿಂದ ಮನುಷ್ಯ ದೈಹಿಕ ವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಕುಗ್ಗಿದ್ದಾನೆ. ಬಲಿಷ್ಠ ಹಾಗೂ ಶ್ರೀಮಂತ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕಿವೆ.

ಜಗತ್ತಿನಾದ್ಯಂತ ವಿಶೇಷ ತಜ್ಞರು ಇದರ ಲಸಿಕೆ ಕಂಡು ಹಿಡಿದು ಮಟ್ಟ ಹಾಕಲು ರಾತ್ರಿ ಹಗಲು ಶ್ರಮಿಸುತ್ತಿದ್ದಾರೆ. ಇದಕ್ಕೆ ಕನಿಷ್ಟ ಸಮಯ ಬೇಕೆ ಬೇಕಾ ಗುತ್ತದೆ. ಇನ್ನೊಂದು ಕಡೆ ಸರ್ಕಾರ ಕೂಡ ಕೊರೊನಾ ತಡೆಗಟ್ಟಲು ಲಾಕ್‌ಡೌನ್‌, ಸೀಲ್‌ಡೌನ್‌, ಕ್ವಾರಂಟೈನ್‌, ಕರ್ಪ್ಯೂ, ಟ್ರೇಸಿಂಗ್‌, ಟೆಸ್ಟಿಂಗ್‌, ಟ್ರೀಟ್‌ಮೆಂಟ್‌, ಹೀಗೆ ಹಲವಾರು ಹರಸಾಹಸ ಮಾಡುತ್ತಲೇ ಇದೆ.

ಹೀಗೆ ಜೀವ ಉಳಿಸಲು ಲಾಕ್‌ ಡೌನ್‌ ಮಾಡಲೇಬೇಕು. ಇಲ್ಲದಿದ್ದರೆ ದಿನೇದಿನೇ ಹರಡುವಿಕೆ ಹೆಚ್ಚುತ್ತದೆ. ಇನ್ನೊಂದು ಕಡೆ ಜೀವನ ನಡೆಸಲು ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸಲು ಲಾಕ್‌ಡೌನ್‌ ಸಡಿಲಿಕೆಗೊಳಿಸಬೇಕು. ಹೀಗೆ ಜೀವ ಮತ್ತು ಜೀವನ ಎರಡನ್ನು ಉಳಿಸಿ ನಡೆಸುವುದು ಸರ್ಕಾರಕ್ಕೆ ದೊಡ್ಡ ತಲೆ ನೋವು ಆಗುತ್ತಿದೆ. ಈ ಲಾಕ್‌ಡೌನ್‌ ಹೀಗೆ ಮುಂದುವ ರೆದರೆ ದೇಶ ಹಲವಾರು ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಸದ್ಯದ ಪರಿಸ್ಥಿತಿಯಲ್ಲಿ ಇವುಗಳಿಗೆಲ್ಲಾ ಪರಿಹಾರ ಹುಡುಕಿ ಲಾಕ್‌ಡೌನ್‌ ತಪ್ಪಿಸಿ ಜೀವನ ಯಥಾಸ್ಥಿತಿಗೆ ತಲುಪಬೇಕಾದರೆ ನಮ್ಮ ಜೀವ ಉಳಿಸಿಕೊಂಡು ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾದರೆ ಮತ್ತು ಸಮಾಜದ ಹಿತದೃಷ್ಟಿಗೋಸ್ಕರ ನಮ್ಮಿಂದ ನಾವೇ ಸ್ವಇಚ್ಛೆಯಿಂದ ಸಾಮಾಜಿಕ ಅಂತರ (Social Distance) ಅಳವ ಡಿಸಿಕೊಂಡು ಕಟ್ಟುನಿಟ್ಟಾಗಿ ಪಾಲಿಸ ಬೇಕು. ಮಾಸ್ಕ್‌ಗಳನ್ನು ಕಟ್ಟು ನಿಟ್ಟಾಗಿ ಧರಿಸಬೇಕು. ಆಗಿಂದಾಗ್ಗೆ ಕೈ ತೊಳೆಯು ವುದು ಮತ್ತು ಸ್ವಚ್ಛತೆಯನ್ನು ಕಾಪಾಡಿ ಕೊಳ್ಳಬೇಕು. ಅನಾವಶ್ಯಕವಾಗಿ ಹೊರ ಗಡೆ ಓಡಾಡು ವುದು, ಮಾತನಾಡುವುದು ಕಡಿಮೆ ಮಾಡಿಕೊಳ್ಳಬೇಕು. ಆಗಿಂದಾಗ್ಗೆ ಬಿಸಿ ನೀರು ಕುಡಿಯುತ್ತಿರಬೇಕು.

ಶೀತ, ಕೆಮ್ಮು, ನೆಗಡಿ ಆಗದಂತೆ ನಿಗಾವಹಿಸಿಕೊಳ್ಳ ಬೇಕು, ರೋಗ ನಿರೋಧಕ ಶಕ್ತಿ ಉಳ್ಳ ಅಡುಗೆ ಪದಾರ್ಥಗಳನ್ನು ಬಳಸಬೇಕು. ಇದರಿಂದ ಕೊರೊನಾ ವನ್ನು ಆರಂಭದ ಹಂತದಲ್ಲೇ ತಡೆಗಟ್ಟಬಹುದಲ್ಲದೆ, ಲಾಕ್‌ಡೌನ್‌ ತಪ್ಪಿಸಿ ಗ್ರೀನ್‌ ಜೋನ್‌ಗೆ ಬರಬಹುದು.

ಕೊರೊನಾ ಬಗ್ಗೆ ಭಯ ಬಿಡಿ … ಎಚ್ಚರಿಕೆ ವಹಿಸಿ… ಇದು ನಮ್ಮ ಹೊಣೆ ಗಾರಿಕೆ ಮತ್ತು ಕರ್ತವ್ಯ. ಇವುಗಳನ್ನು ನಾವು ಸ್ವಇಚ್ಛೆಯಿಂದ ಅಳವಡಿಸೋಣ. ಕೊರೊನಾ ಮುಕ್ತ ದೇಶವನ್ನಾಗಿ ಮಾಡೋಣ.

ಹೆಚ್‌.ವಿ. ಮಂಜುನಾಥ ಸ್ವಾಮಿ, ದಾವಣಗೆರೆ.

error: Content is protected !!