ತರಬೇತಿಗೆ ಮುಕ್ತಾಯ ಎಂಬುದಿಲ್ಲ: ಎಸ್ಪಿ

8ನೇ ತಂಡದ 66 ಮಂದಿ ಸಶಸ್ತ್ರ ಪೊಲೀಸ್ ಪ್ರಶಿಕ್ಷಾಣಾರ್ಥಿಗಳ ನಿರ್ಗಮನ

ದಾವಣಗೆರೆ, ಏ.21- ಜೀವನದಲ್ಲಿ ತರ ಬೇತಿಗಳಿಗೆ ಮುಕ್ತಾಯ ಎಂಬುದಿಲ್ಲ. ನಮ್ಮ ಕರ್ತವ್ಯಕ್ಕೆ ತಕ್ಕಂತೆ ತರಬೇತಿ ನಿರಂತರವಾಗಿ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

ಅವರು, ಇಂದು ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋ ಜಿಸಲಾಗಿದ್ದ ಪೊಲೀಸ್ ತರಬೇತಿ ಶಾಲೆಯ 8ನೇ ತಂಡದ ಸಶಸ್ತ್ರ ಪೊಲೀಸ್ ಪ್ರಶಿಕ್ಷ ಣಾರ್ಥಿಗಳ ನಿರ್ಗಮನದ ಪಥ ಸಂಚಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸೇವಾವಧಿ ತನಕವೂ ಪ್ರತಿದಿನ, ಪ್ರತಿ ಕ್ಷಣ ಹೊಸ ಪರಿಸ್ಥಿತಿ, ಕಾನೂನು ನಿಯಮಗಳ ಅಡಿಯಲ್ಲಿ ಕೆಲಸ ಮಾಡಲು ಬುನಾದಿಯಾಗಿದೆ. ಕಳೆದ 8 ತಿಂಗಳ ಕಾಲ ಅಧಿಕಾರಿ ಮತ್ತು ಸಿಬ್ಬಂದಿಗಳ ಸಹಕಾರದಲ್ಲಿ ತರಬೇತಿಯನ್ನು ಪಡೆದಿದ್ದು, ಈ ತರಬೇತಿ ಕೇವಲ ಇಷ್ಟಕ್ಕೆ ಸೀಮಿತವಾಗದೇ ಮತ್ತಷ್ಟು ತರಬೇತಿಯನ್ನು ಪಡೆದು ಸಮರ್ಪಕ ಸೇವೆ ಸಲ್ಲಿಸಲು ಸನ್ನದ್ಧರಾಗಿರಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪ್ರಸ್ತುತ ಕೊರೊನಾ ದೊಡ್ಡ ಸವಾಲಾಗಿ ಎಲ್ಲೆಡೆ ಹರಡಿದ್ದು, ತರಬೇತಿ ಪಡೆದು ಹೊರ ಬರುತ್ತಿರುವ ನಿಮಗೆ ಕೊರೊನಾ ಸಂಬಂಧಿಸಿದ ಕರ್ತವ್ಯಕ್ಕೆ ನೇಮಿಸಲಿದ್ದು, ಇದಕ್ಕೆ ಮಾನಸಿಕ, ದೈಹಿಕವಾಗಿ ಸಿದ್ದರಾಗಿರಬೇಕು. ಕೊರೊನಾ ಕಾರಣ ರಾತ್ರಿ ಮತ್ತು ವಾರದ ಕರ್ಫ್ಯೂ, ಲಾಕ್‍ಡೌನ್ ಸೇರಿದಂತೆ ಕಠಿಣ ನಿಬಂಧನೆಗಳು ಜಾರಿಗೊಂಡಿದೆ. ಈ ಕಾನೂನಿನ ಸೂಚನೆ ಪಾಲನೆ ಜೊತೆಗೆ ನೀವು ಸಹ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಇಲಾಖೆ ಮೂಲಕ ಸಾರ್ವಜನಿಕರಿಗೆ ಪ್ರಾಮಾಣಿಕ ಸೇವೆ ನೀಡುವ ಬಗ್ಗೆ ಪಡೆದಿರುವ ಪ್ರತಿಜೆಯನ್ನು ಮರೆಯಬಾರದು. ದೇಶದ ಪ್ರಮುಖ ರಕ್ಷಣೆಯ ಜವಾಬ್ದಾರಿ ನಮ್ಮ ಮೇಲಿದೆ. ಶಸ್ತ್ರ ಸಹಿತ ಸೇವೆ ನೀಡಲು ನಮಗೆ ದೇಶ ಸೇವೆ ಮಾಡುವ ಸದಾವಕಾಶ ಇದೆ. ಪ್ರಜೆಯಿಂದ ಪ್ರತಿಜ್ಞೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ದೇಶ ಸೇವೆಯಲ್ಲಿ ಉತ್ತಮ ಕೊಡುಗೆ ನೀಡಬಹುದಲ್ಲದೇ, ಸೇವೆಯಲ್ಲಿ ತೃಪ್ತಿ ಕಂಡುಕೊಳ್ಳಬಹುದೆಂದರು.

ತರಬೇತಿ ಶಾಲೆಯಲ್ಲಿ ಕಾರವಾರ, ಮೈಸೂ ರು ನಗರ, ಬೆಳಗಾವಿ, ಉಡುಪಿ, ವಿಜಯಪುರ, ಹಾಸನ, ಶಿವಮೊಗ್ಗ, ಹುಬ್ಬಳಿ, ಧಾರವಾಡ, ಬಳ್ಳಾರಿ, ಬೆಂಗಳೂರು ನಗರ ಈ ಭಾಗಗಳಿಂದ ಬಂದು ತರಬೇತಿ ಪಡೆದಿದ್ದ ಒಟ್ಟು 66 ಮಂದಿ ಪ್ರಶಿಕ್ಷಾರ್ಥಿಗಳು ನಿರ್ಗಮನಗೊಂಡರು.

ಇದಕ್ಕೂ ಮುನ್ನ 8ನೇ ತಂಡದ ಸಶಸ್ತ್ರ ಪೊಲೀಸ್ ಪ್ರಶಿಣಾರ್ಥಿಗಳು ಆಕರ್ಷಕ ಪಥ ಸಂಚಲನ ನಡೆಸಿ ಗಮನ ಸೆಳೆದರು. ಡಿಎಆರ್ ಪೊಲೀಸ್ ಉಪಾಧೀಕ್ಷಕ ಪಿ.ಬಿ.ಪ್ರಕಾಶ್ ಕವಾಯತು ಮುಖ್ಯ ನಾಯಕರಾಗಿದ್ದರು. ಆರ್‍ಪಿಐ ಕಿರಣ್‍ಕುಮಾರ್ ಎಸ್.ಎನ್. ಅವರು ಕವಾಯತಿನ ಉಪನಾಯಕರಾಗಿದ್ದರು.

ಪ್ರಶಸ್ತಿ ಪಡೆದವರು: ಹುಬ್ಬಳಿ, ಧಾರವಾಡ ನಗರದ ಲಕ್ಷ್ಮಣ ಎಂಬಾತ ಸರ್ವೋತ್ತಮ ಪ್ರಶಸ್ತಿ ಪಡೆದರು. ಒಳಾಂಗಣ ವಿಭಾಗದಲ್ಲಿ ಬೆಳಗಾವಿ ಜಿಲ್ಲೆಯ ರಮೇಶ್ ಸ ಬಿರಾದಾರ ಪಾಟೀಲ, ಮೈಸೂರು ನಗರದ ಡಿಂಡಿಮ ಶಂಕರ, ಹುಬ್ಬಳಿ ಧಾರವಾಡದ ಮಂಜುನಾಥ ಹಡಪದ ಪ್ರಶಸ್ತಿ ಪಡೆದರು. ಹೊರಾಂಗಣ ವಿಭಾಗದಲ್ಲಿ ಹುಬ್ಬಳಿ-ಧಾರವಾಡದ ಲಕ್ಷ್ಮಣ, ಕಾರವಾರ ಜಿಲ್ಲೆಯ ಡಿ.ಇಂದ್ರಕುಮಾರ್, ಬೆಂಗಳೂರು ನಗರದ ರಾಘವೇಂದ್ರ .ವಿ ಅವರಾದಿ ಹಾಗೂ ಎಸ್.ಎಲ್.ಆರ್. ರೈಫಲ್ ಶೂಟಿಂಗ್ ವಿಭಾಗದಲ್ಲಿ ಮಾರುತಿ ಅಂಕಲಗಿ, ಕುಮಾರನಾಯ್ಕ್, ಕಾರವಾರ ಜಿಲ್ಲೆಯ ಡಿ.ಇಂದ್ರಕುಮಾರ್ ಪ್ರಶಸ್ತಿ ಪಡೆದರು.

error: Content is protected !!