ಅಂತರ್ಜಾಲದ ಮೂಲಕ ತರಳಬಾಳು ಹುಣ್ಣಿಮೆ ವೀಕ್ಷಣೆ

ಸಿರಿಗೆರೆ, ಫೆ.18 – ಭಾವೈಕ್ಯತಾ ಹಾಗೂ ಜ್ಞಾನ ದಾಸೋಹ ಕಾರ್ಯಕ್ರಮ ಎಂದು ಹೆಸರಾಗಿರುವ ‘ತರಳಬಾಳು ಹುಣ್ಣಿಮೆ’ ಮಹೋತ್ಸವ ಈ ವರ್ಷ ಬಳ್ಳಾರಿ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಫೆಬ್ರವರಿ 19 ರಿಂದ 27ರವರೆಗೆ ನಡೆಯಬೇಕಿತ್ತು. ತರಳ ಬಾಳು ಹುಣ್ಣಿಮೆ ಮಹೋತ್ಸ ವವನ್ನು ಕೊರೊನಾ ಹಿನ್ನೆಲೆಯಲ್ಲಿ ಅಂತರ್ಜಾಲದ ಮುಖೇನ ಆಚರಿಸಲು ತರಳಬಾಳು ಬೃಹ ನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತೀರ್ಮಾನ ಕೈಗೊಂಡಿದ್ದಾರೆ.

ತರಳಬಾಳು ಜಗದ್ಗುರು ಬೃಹನ್ಮಠವು ಕಳೆದ 70 ವರ್ಷಗಳಿಂದ ನಾಡಿನ ಒಳ ಹೊರಗೆ ಆಚರಿಸಿಕೊಂಡು ಬಂದಿರುವ ತರ ಳಬಾಳು ಹುಣ್ಣಿಮೆ ಮಹೋತ್ಸವ ಒಂದು ನಾಡಹಬ್ಬವಾಗಿ ಜನಮನ್ನಣೆ ಪಡೆದಿದೆ. ಜಾತಿ, ಮತ ಪ್ರಾಂತ್ಯ ಪ್ರದೇಶಗಳ ಭೇದವಿ ಲ್ಲದೆ ಭಾವೈಕ್ಯ ಸಂಗಮವಾಗಿ ಮಹೋತ್ಸವ ಮಹಾವೇದಿಕೆಯಾಗಿ ಪರಿಣಮಿಸಿದೆ. 

ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಪ್ರತಿ ವರ್ಷವೂ ನಾಡಿನ ಒಳ ಹೊರಗೆ ಯಶಸ್ವಿಯಾಗಿ ನಡೆದುಕೊಂಡು ಬಂದು ನಾಡಿನ ಪ್ರಮುಖ ಧಾರ್ಮಿಕ ಸಮಾರಂ ಭಗಳಿಗೆ ಮಾತೃ ಸ್ವರೂಪದಂತಿರುವ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ದಿವ್ಯ ಮಾರ್ಗದ ರ್ಶನದಲ್ಲಿ ಜ್ಞಾನ ದಾಸೋಹದ ಸಮಾರಂಭವಾಗಿ ಹೊಸ ಆಯಾಮವನ್ನು ಪಡೆದಿದೆ.

2021ರ ಫೆಬ್ರವರಿ ತಿಂಗಳಿನಲ್ಲಿ ಬಳ್ಳಾರಿ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ನಡೆಸಲು ನಿರ್ಧರಿಸಲಾಗಿದ್ದ ತರಳಬಾಳು ಹುಣ್ಣಿಮೆಯನ್ನು ಕೊರೊನಾ ಕಾರಣದಿಂದ ಮುಂದೂಡಿದ್ದು, ಸರ್ಕಾರದ ಆದೇಶಕ್ಕನು ಗುಣವಾಗಿ ಹಾಗೂ ಶ್ರೀಮಠದ ಸಂಪ್ರದಾ ಯದಂತೆ ಸರಳವಾಗಿ, ವಿಭಿನ್ನವಾಗಿ ಸಾಮಾ ಜಿಕ ಜಾಲತಾಣದ ಮುಖಾಂತರ ತರಳ ಬಾಳು ಹುಣ್ಣಿಮೆ ಮಹೋತ್ಸವ ಆಚರಿಸಲು ಜಗದ್ಗುರುಗಳು ಸಂಕಲ್ಪಿಸಿದ್ದಾರೆ.

ಜಾಲತಾಣದಲ್ಲಿ ಸಭಾ ಕಾರ್ಯಕ್ರಮಕ್ಕೆ ಮಾತ್ರ ಸೀಮಿತಗೊಳಿಸಿ ತರಳಬಾಳು ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮದ ನೇರ ದೃಶ್ಯಾವಳಿಯು ತರಳಬಾಳು ಯ್ಯೂಟೂಬ್ ಚಾನಲ್‍ಗೆ ಸಬ್‍ಸ್ಕ್ರೈಬ್ ಆಗುವ ಮೂಲಕ ಭಕ್ತರು, ಶಿಷ್ಯವೃಂದ, ವಿದ್ಯಾರ್ಥಿ- ವಿದ್ಯಾರ್ಥಿನೀ ಯರು ಹುಣ್ಣಿಮೆಯ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿದಿನದ ವಿಶೇಷ : ನಾಳೆ ದಿನಾಂಕ 19 ರಿಂದ 27ರವರೆಗೆ ಬೆಳಗ್ಗೆ 6 ರಿಂದ 6.30ರವರೆಗೆ ಶಿವಮಂತ್ರ ಲೇಖನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ.

ಸಭಾಕಾರ್ಯಕ್ರಮ ಸಂಜೆ ನೇರ ಪ್ರಸಾರ ಜಾಲತಾಣದಲ್ಲಿ ಲಿಂಕ್ :  https:  //www.youtube.com/channel/UCuUAJc9y dIUh7RfObIl_4mg

error: Content is protected !!