ದಾವಣಗೆರೆ, ಜು.9- ಆನ್ಲೈನ್ ಬ್ಯಾಂಕಿಂಗ್ ಪಾಸ್ವರ್ಡ್ ಬ್ಲಾಕ್ ಆಗಿದೆ ಎಂದು ಕಸ್ಟಮರ್ ಕೇರ್ಗೆ ಫೋನ್ ಮಾಡಿದ ವ್ಯಕ್ತಿಯಿಂದ ಒಟಿಪಿ ನಂಬರ್ ಪಡೆದು ವಂಚನೆ ಮಾಡಿದ ಘಟನೆ ಹೊನ್ನಾಳಿಯಲ್ಲಿ ನಡೆದಿದೆ.
ಎಸ್. ಕೃಷ್ಣನ್ ಉನ್ನಿತನ್ ವಂಚನೆಗೆ ಒಳಗಾಗಿದ್ದಾರೆ. ಉನ್ನಿತನ್ ಅವರು ಕೇರಳದ ಸೌತ್ ಇಂಡಿಯನ್ ಬ್ಯಾಂಕ್ನಲ್ಲಿ ಎಸ್.ಬಿ ಖಾತೆ ಹೊಂದಿದ್ದು, ಪಾಸ್ ವರ್ಡ್ ಸರಿಪಡಿಸಲು ಕಸ್ಟಮರ್ ಕೇರ್ಗೆ ಫೋನ್ ಮಾಡಿದ್ದಾಗ ಎಲ್ಲಾ ವಿವರವನ್ನು ನೀಡಿದ್ದರು. ಬುಧವಾರ ಬ್ಯಾಂಕ್ ಸಿಬ್ಬಂದಿ ಕರೆ ಮಾಡಿ, ಹೌಸ್ ಲೋನ್ ಪಡೆದಿದ್ದೀರಾ ಎಂದು ಕೇಳಿದ್ದಾರೆ. ಲೋನ್ ಪಡೆದಿಲ್ಲ ಎಂದಾಗ ನಿಮ್ಮ ಖಾತೆಯಿಂದ ಹೌಸಿಂಗ್ ಲೋನ್ಗೆ ಹಂತ ಹಂತವಾಗಿ 13.45 ಲಕ್ಷ ಹಣ ಕಟ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ. ಒಟಿಪಿ ನಂಬರ್ ಬೇರೆಯವರಿಗೆ ಸಿಗಲು ಕಾರಣವಾದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಸ್. ಕೃಷ್ಣನ್ ಉನ್ನಿತನ್ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.