ದಾವಣ ಗೆರೆ,ಏ.19- ಅತಿ ಕಿರಿಯ ವಯಸ್ಸಿನಲ್ಲಿ (24) ನ್ಯಾಯಾ ಧೀಶರಾಗಿ ಆಯ್ಕೆ ಯಾಗಿರುವ ಚೇತನ ಆರಿಕಟ್ಟಿ ಅವರಿಗೆ ಸುವರ್ಣ ಕರ್ನಾಟಕ ವೇದಿಕೆಯಿಂದ ಅಭಿನಂದಿಸಿ, ಗೌರವಿಸ ಲಾಯಿತು.
ಕಾರ್ಯಕ್ರಮದಲ್ಲಿ ಮಹಾಪೌರ ಎಸ್.ಟಿ. ವೀರೇಶ್, ಉಪ ತಹಶೀಲ್ದಾರ್ ಬಿ.ಪಿ. ಜಗನ್ನಾಥ್, ವೇದಿಕೆ ರಾಜ್ಯಾಧ್ಯಕ್ಷ ಸಂತೋಷ್ ಕುಮಾರ್, ಲಯನ್ಸ್ ಕ್ಲಬ್ ಅಧ್ಯಕ್ಷ ಓಂಕಾರಪ್ಪ, ಮಾಜಿ ಅಧ್ಯಕ್ಷ ನಾಗರಾಜ್ ದೇವರಮನಿ, ಹೆಚ್. ಪರಶುರಾಮ್, ಮಹಾಂತೇಶ್ ವಿ. ಒಣರೊಟ್ಟಿ, ಸೂರ್ಯ ಪ್ರಕಾಶ್, ಜಯಪ್ಪ, ಎಸ್.ಪಿ. ಜಗದೀಶ್, ಶಿವು, ಮಂಜುಳಮ್ಮ ಹಾಗೂ ವೇದಿಕೆಯ ಕಾರ್ಯಕರ್ತರು ಭಾಗವಹಿಸಿದ್ದರು.