ಎಸ್ಸೆಸ್, ಎಸ್ಸೆಸ್ಸೆಂ ಕಾರ್ಯದಿಂದ ಕುಟುಂಬದ ಹೆಸರು ಚಿರಸ್ಥಾಯಿ

ಎಸ್ಸೆಸ್ ಕುಟುಂಬದಿಂದ ಉಚಿತ ಲಸಿಕಾ ಶಿಬಿರ

ಮಾಜಿ ಸಚಿವ ಕೆ.ಹೆಚ್. ಮುನಿಯಪ್ಪ ಶ್ಲ್ಯಾಘನೆ

ದಾವಣಗೆರೆ, ಜು.9- ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಶಾಮನೂರು ಮಲ್ಲಿಕಾರ್ಜುನ್ ಅವರುಗಳು ಮಾಡುತ್ತಿರುವ ಜೀವ ಉಳಿಸುವ ಕಾರ್ಯದಿಂದ ಅವರ ಕುಟುಂಬದ ಹೆಸರು ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದು ಮಾಜಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಶ್ಲ್ಯಾಘಿಸಿದರು.

ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮೊನ್ನೆ ಹೋಲ್‍ಸೇಲ್ ತರಕಾರಿ ವ್ಯಾಪಾರ ಸ್ಥರಿಗೆ ಎಸ್ಸೆಸ್ ಕುಟುಂಬದಿಂದ ವೈಯಕ್ತಿಕ ವಾಗಿ ನೀಡುತ್ತಿರುವ ಉಚಿತ ಲಸಿಕಾ ಶಿಬಿರವನ್ನುದ್ದೇಶಿಸಿ ಮಾತನಾಡಿದರು.

ಸರ್ಕಾರ ಮಾಡಬೇಕಾದ ಈ ಕಾರ್ಯ ವನ್ನು ಎಸ್ಸೆಸ್, ಎಸ್ಸೆಸ್ಸೆಂ ಮಾಡುತ್ತಿದ್ದಾರೆ. ಅವರು ವ್ಯಕ್ತಿಯಲ್ಲ, ಶಕ್ತಿ ಎಂದು ಪ್ರಶಂಸಿಸಿ ದರಲ್ಲದೇ, ಪ್ರತಿಯೊಬ್ಬ ನಾಗರಿಕರಿಗೂ ಲಸಿಕೆ ನೀಡುವುದು ಸರ್ಕಾರದ ಕರ್ತವ್ಯ. ಆದರೆ ಸರ್ಕಾರ ವಾರಕ್ಕೊಮ್ಮೆಯೂ ಲಸಿಕೆ ನೀಡುತ್ತಿಲ್ಲ. ಶಾಮನೂರು ಕುಟುಂಬದವರು ಪ್ರತಿನಿತ್ಯ ಲಸಿಕೆ ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ಕೆಪಿಸಿಸಿ ಕಾರ್ಯದರ್ಶಿ ಗುರಪ್ಪ ನಾಯ್ಡು, ಅಮೃತೇಶ್, ಕೆ.ಎಸ್. ಬಸವಂತಪ್ಪ, ಅಯೂಬ್ ಪೈಲ್ವಾನ್, ನಗರ ಪಾಲಿಕೆ ಸದಸ್ಯ ಜಿ.ಎಸ್. ಮಂಜುನಾಥ್, ಎಪಿಎಂಸಿ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್, ಸದಸ್ಯರಾದ ದೊಗ್ಗಳ್ಳಿ ಬಸವರಾಜ್, ನಗರಸಭೆ ಮಾಜಿ ಉಪಾಧ್ಯಕ್ಷ ಎಸ್.ಎನ್. ಚಂದ್ರಪ್ಪ, ಮುಖಂಡರುಗಳಾದ ಎಸ್.ಎನ್. ತಿಪ್ಪೇಸ್ವಾಮಿ, ಆರ್.ವಾಸುದೇವ್,   ಕೆ. ನೀಲಪ್ಪ, ಡಿಟಿಎನ್ ನಾರಾಯಣಪ್ಪ, ಎ.ಆರ್. ರಾಮಚಂದ್ರಪ್ಪ, ಎಂ.ಎನ್. ಮಹಾ ದೇವಣ್ಣ, ಮಲ್ಲೇಶ್, ರಾಕೇಶ್, ಮಾರುತಿ, ಆನಂದ ಸೇರಿದಂತೆ ಇತರರಿದ್ದರು.

error: Content is protected !!