ಮಲೇಬೆನ್ನೂರು, ಏ.19- ಕೊಕ್ಕನೂರು ಗ್ರಾಮದ ಆಂಜನೇಯ ಬಡಾವಣೆಯಲ್ಲಿ ರಾಷ್ಟ್ರೀಯ ಸಾಮಾಜಿಕ ಜಾಗೃತಿ ವೇದಿಕೆ ವತಿಯಿಂದ ಡಾ. ಅಂಬೇಡ್ಕರ್ ಅವರ 130 ನೇ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆ ರಾಜ್ಯಾಧ್ಯಕ್ಷ ಶಶಿ ನಾಯ್ಕ್, ರಾಷ್ಟ್ರೀಯ ಸಾಮಾ ಜಿಕ ಜಾಗೃತಿ ವೇದಿಕೆಯ ವಿದ್ಯಾರ್ಥಿ ಘಟಕದ ಹರಿಹರ ತಾಲ್ಲೂಕು ಅಧ್ಯಕ್ಷ ಶಿವುರಾಜ್, ಮಹಾಂತೇಶ್, ಮಂಜು ಮತ್ತು ಹರಿಹರ ತಾಲ್ಲೂಕು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್, ಗ್ರಾ.ಪಂ. ಸದಸ್ಯ ಎ.ಕೆ. ಬಸವರಾಜಪ್ಪ ಹಾಗೂ ವೇದಿಕೆಯ ಪದಾಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.