ಮಾನವೀಯತೆಗಾಗಿ ಮನಮಿಡಿದ ಮಹನೀಯರು ಅಂಬೇಡ್ಕರ್

ಆರ್.ಬಿ. ಪಾಟೀಲ್

ದಾವಣಗೆರೆ, ಏ. 19- ಅಂಬೇ ಡ್ಕರ್‍ರವರು ಮಧ್ಯಪ್ರದೇಶದ ಅಂಬೇ ವಾಡಿ ಗ್ರಾಮದಲ್ಲಿ ಜನಿಸಿ, ಮಹಾರಾಷ್ಟ್ರ ದಲ್ಲಿ ಬೆಳೆದು, ಮುಂದೆ ಕಾನೂನು ತಜ್ಞರಾಗಿ ಬೆಳೆದು ಸ್ವತಂತ್ರ ಭಾರತಕ್ಕೆ ಸಂವಿಧಾನ ಕೊಟ್ಟವರು. `ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ’ ಎಂದು ಯುವ ಜನತೆಗೆ ತಿಳಿಸಿ, ಬಯಲೊಳಗೆ ಬದುಕು ಕಟ್ಟಿಕೊಂಡವರ ಬಂಧುವಾಗಿ, ದಮನಿತರ ನೋವಿಗೆ ಮಿಡಿದ ಕಾರುಣ್ಯ ಸಿಂಧುವಾಗಿ, ಎಲ್ಲರ ಮನದಲಿ ಸ್ವಾಭಿಮಾನವ ತುಂಬಿದವರು ಎಂದು ಆರ್.ಬಿ. ಪಾಟೀಲ್ ತಿಳಿಸಿದರು.

ಅವರು ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟಿನಲ್ಲಿ `ಅಂಬೇಡ್ಕರ್ ಜಯಂತಿ’ ಪ್ರಯುಕ್ತ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಶಿಕ್ಷಣ, ಸಂಘಟನೆ, ಸಂಘರ್ಷಕ್ಕೆ ಶಕ್ತಿ ಕೊಟ್ಟಂತವರು ಬಾಬಾ ಸಾಹೇಬ್ ಅಂಬೇಡ್ಕರ್‍. ಅವರು ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಜೀವನಪರ್ಯಂತ ದುಡಿದವರು ಎಂದು ಅಂಬೇಡ್ಕರ್‍ರ ಜೀವನ ಚರಿತ್ರೆಯ ಬಗ್ಗೆ ತಿಳಿಸಿದರು. ಸಂವಿಧಾನದ ಸ್ವರೂಪ, ಹಕ್ಕು ಮತ್ತು ಕರ್ತವ್ಯಗಳನ್ನು ಕುರಿತು ಪೌರ ಕಾರ್ಮಿಕರಿಗೆ ಅರಿವನ್ನುಂಟುಮಾಡಿದರು.

ಪ್ರೊ|| ಎಂ.ಅಬ್ದುಲ್ ರೆಹಮಾನ್ ಪಾಷರವರು ವೀಡಿಯೋ ಕಾಲ್‍ನಲ್ಲಿ ಮಾತನಾಡಿದರು. ಅಧ್ಯಕ್ಷತೆಯನ್ನು ಶಿವನಕೆರೆ ಬಸವಲಿಂಗಪ್ಪ ವಹಿಸಿದ್ದರು.

error: Content is protected !!