ಕಾಲ, ಕಾಸು, ಕಾಯಕಕ್ಕೆ ಮಹತ್ವ ಕೊಟ್ಟಿದ್ದ ತರಳಬಾಳು ಲಿಂ. ಜಗದ್ಗುರು ಶಿವಕುಮಾರ ಶ್ರೀಗಳು

ದಾವಣಗೆರೆ,ಸೆ. 30-ಸಿರಿಗೆರೆಯ ತರಳಬಾಳು ಬೃಹ ನ್ಮಠದ 20ನೇ ಪೀಠಾಧಿಪತಿ ಲಿಂ|| ಶ್ರೀ ಶಿವಕುಮಾರ  ಶಿವಾಚಾರ್ಯ ಮಹಾಸ್ವಾಮಿಗಳವರು ಶ್ರೀ ಸಂಸ್ಥಾನದ ಜಗದ್ಗುರುಗಳಾಗಿ ಅತ್ಯಂತ ವಿಷಮಸ್ಥಿತಿಯಲ್ಲಿ ಸಿಂಹಾಸನಾರೋಹಣ ಮಾಡಿದ್ದರು.  ಶ್ರೀ ಶಿವಕುಮಾರ ಸ್ವಾಮಿಗಳು ಶ್ರೀಮಠವು ಆರ್ಥಿಕ ದುಸ್ಥಿತಿ ಯಲ್ಲಿ, ದುಗ್ಗಾಣಿ ಮಠವೆಂದೇ ಹೆಸರು ಪಡೆದಿದ್ದ ಸಂದರ್ಭದಲ್ಲಿ ತುಂಬಾ ದೊಡ್ಡ ಸಮಾಜವನ್ನು ಸುಸ್ಥಿತಿಗೆ ತರುವ ಜವಾಬ್ದಾರಿ ಹೊಂದಿದ್ದರು. ಅನೇಕ ಕಷ್ಟ ಕಾರ್ಪಣ್ಯಗಳನ್ನು ಧೀರೋದಾತ್ತವಾಗಿ ಎದುರಿಸಿ ನಾಡು, ದೇಶ ಮೆಚ್ಚುವಂತೆ ಸಮಾಜವನ್ನು ಸುಸ್ಥಿತಿಗೆ ತಂದ ಧೀಮಂತ ಜಗದ್ಗುರುಗಳಾಗಿದ್ದರು.

ಶಿವಕುಮಾರ ಶ್ರೀಗಳವರು ಬಸವ ಜಯಂತಿಯಂದು ಜನ್ಮ ತಾಳಿದವ ರಾಗಿದ್ದು, ಬಸವಣ್ಣನವರ ತತ್ವ ಸಿದ್ಧಾಂತ ಗಳನ್ನು ಚಾಚೂ ತಪ್ಪದೇ ಶ್ರೀಮಠದ ವಿವಿಧ ಕಾರ್ಯಕ್ರಮಗಳ ಮೂಲಕ ಅನುಷ್ಠಾನ ಗೊಳಿಸಿದ ಪ್ರಥಮರೆನಿಸಿಕೊಂಡಿದ್ದರು. 

ಪೂಜ್ಯರು ಚಾಚೂ ತಪ್ಪದೇ ಕಾಲ, ಕಾಸು, ಕಾಯಕಕ್ಕೆ   ಮಹತ್ವ ಕೊಟ್ಟು, ನುಡಿದಂತೆ ನಡೆದು ತೋರಿಸಿದ ಧೀಮಂತ ಗುರುಗಳಾಗಿದ್ದರು ಎಂದು ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದ್ದಾರೆ. 

ಈಗಿನ ತರಳಬಾಳು ಜಗದ್ಗುರುಗಳಾದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಲಿಂಗೈಕ್ಯ ಶ್ರೀಗಳ ಹಾಗೂ ಬಸವೇಶ್ವರರ ತತ್ವಾದರ್ಶಗಳನ್ನು ವಿಶ್ವದ ಉದ್ದಗಲಕ್ಕೂ ತಲುಪಿಸುವಂತಹ ಮಹಾನ್‌ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ವಾಮದೇವಪ್ಪ ತಮ್ಮ ಭಕ್ತಿ ಸಮರ್ಪಣಾ ನುಡಿಗಳನ್ನು ಸಲ್ಲಿಸಿದರು. 

ನಗರದ ತಾಲ್ಲೂಕು ಆಫೀಸ್ ಪಕ್ಕದ ಶ್ರೀ ಬನಶಂಕರಿ ಅಂಡ್ ಕೋ. ಕಚೇರಿಯಲ್ಲಿ ಅಡಿಕೆ ವರ್ತಕರು ಮತ್ತು ಅಕ್ಕಿ ವರ್ತಕರು ಮೊನ್ನೆ ಏರ್ಪಡಿಸಿದ್ದ ಲಿಂಗೈಕ್ಯ ಜಗದ್ಗುರು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 29ನೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. 

ಮತ್ತೋರ್ವ ಅತಿಥಿಯಾಗಿದ್ದ  ಅಡಿಕೆ ವರ್ತಕ ಹೆಚ್.ಎಂ. ಬಸವರಾಜಪ್ಪ ಅವರು, ಲಿಂ. ಶ್ರೀಗಳವರಿಗೆ ನುಡಿ ನಮನ ಸಲ್ಲಿಸುತ್ತಾ, ಲಿಂ. ಶಿವಕುಮಾರ ಶ್ರೀಗಳನ್ನು ಪರಿಚಯಿಸುವುದೆಂದರೆ ಸೂರ್ಯ-ಚಂದ್ರರನ್ನು ಪರಿಚಯಿಸಿದಂತಾಗುತ್ತದೆ ಎಂದು ಹಲವಾರು ಪೂಜ್ಯರ ದೃಷ್ಟಾಂತಗಳೊಂದಿಗೆ ತಿಳಿಸಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಪಿಎಂಸಿ ಮಾಜಿ ಅಧ್ಯಕ್ಷರೂ ಆದ  ಹಾಲಿ ಸದಸ್ಯ ಮುದೇಗೌಡ್ರ ಗಿರೀಶ್‌ ಮಾತನಾಡಿ, ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಸಾರ್ಥಕ ಸೇವೆಯನ್ನು ಹೇಳಿದರು. 

ಅಡಿಕೆ ವರ್ತಕರೂ ಆಗಿರುವ ಎಲೆಬೇತೂರಿನ ನಂದಿ ಬಸವರಾಜಪ್ಪ ಮತ್ತು ಚಿಕ್ಕನಹಳ್ಳಿ  ಪಿ.ಬಿ.ಪರಮೇಶ್ವರಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ದೊಗ್ಗಳ್ಳಿ ಶಿವಕುಮಾರ್, ಕುಕ್ಕುವಾಡ ಸುರೇಂದ್ರಪ್ಪ, ಬಿ.ಕೆ.ಬಿ. ಸೋಮಣ್ಣ,  ಬನಶಂಕರಿ ಶಂಕ್ರಣ್ಣ, ಪಾಂಡೋಮಟ್ಟಿ ರವಿ, ಗಡಿಗುಡಾಳ್ ಮಂಜುನಾಥ್, ಕಂಸಾಗರದ ಪಂಚಾಕ್ಷರಪ್ಪ, ಕಿರುವಾಡಿ ಸೋಮಣ್ಣ, ಮಳಲ್ಕೆರೆ ಮಹೇಶ್ವರಯ್ಯ, ಆರ್.ಜೆ. ರುದ್ರೇಶ್, ದೊಗ್ಗಳ್ಳಿ ಬಸವರಾಜ್, ಕರೆಶಿವಪ್ಳರ ಸಿದ್ಧೇಶ್, ಈಚಘಟ್ಟ ಶಿವಕುಮಾರ್, ಬಿ.ಜಿ.ಆರ್. ಹಾಲೇಶ್, ದೊಗ್ಗಳ್ಳಿ ಮಲ್ಲಿಕಾರ್ಜುನ್, ಬುಳ್ಳಾಪುರ ಮಲ್ಲಿಕಾರ್ಜುನ ಸ್ವಾಮಿ, ಕಬ್ಬೂರು ಸುರೇಶ್, ಕೆ.ಎಸ್. ಬಸವರಾಜ್ ವಕೀಲರು, ಬೊಮ್ಮೇನಹಳ್ಳಿ ಲಿಂಗರಾಜು, ಬುಳ್ಳಾಪುರ ಸಿದ್ಧೇಶ್, ಆವರಗೆರೆ ಜಯಣ್ಣ, ಬಾವಿಹಾಳ್ ಶಿವಕುಮಾರ್, ಬಾತಿ ಶಿವಕುಮಾರ್, ಆನೆಕೊಂಡದ ಜಿ.ಎಸ್. ಸಿದ್ಧೇಶ್, ದೀಪಾ ರಾಜಣ್ಣ, ಗಾಂಧಿನಗರ ವೃಷಭೇಂದ್ರಪ್ಪ, ಬಿ.ಎಂ.ಟಿ. ಅಶೋಕ್, ಅಣಬೇರು ವಿನಯ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಎಲೆಬೇತೂರು ಎಂ. ಷಡಾಕ್ಷರಪ್ಪ ಪ್ರಾರ್ಥಿಸಿದರು. ವಿಠಲಾಪುರ ಕಿರಣ್ ಸ್ವಾಗತಿಸಿದರು. ಬನಶಂಕರಿ ಸದಣ್ಣ ಕಾರ್ಯಕ್ರಮ ನಿರೂಪಿಸಿದರು.  ರಾಮನ ಗೊಂಡನಹಳ್ಳಿ ಜಯಣ್ಣ ವಂದಿಸಿದರು.

error: Content is protected !!