ಅಪರಿಚಿತ ಮಹಿಳೆ ಶವ ಪತ್ತೆ

ದಾವಣಗೆರೆ, ಜು.9- ಅಮರಾವತಿ ಕಾಲೋನಿ-ಹರಿಹರ ರೈಲು ನಿಲ್ದಾಣಗಳ ಮಧ್ಯೆ ಸುಮಾರು 60 ವರ್ಷ ವಯಸ್ಸಿನ ಅಪರಿಚಿತ ಹೆಂಗಸಿನ ಶವ ಪತ್ತೆಯಾಗಿದೆ.

ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ ಹೊಂದಿದ್ದಾಳೆ. ಬ್ರೌನ್‌ ಕಲರ್‌ ಡಿಸೈನ್‌ ಸೀರೆ, ಬ್ರೌನ್‌ ಕಲರ್‌ ರವಿಕೆ, ಬಿಳಿ ಮತ್ತು ಕಾಫಿ ಗೆರೆಗಳಿರುವ ತುಂಬು ತೋಳಿನ ಸ್ವೆಟ್ಟರ್‌ ತೊಟ್ಟಿರುತ್ತಾಳೆ. ಮೃತಳ ಬಲಗೈ ಮೇಲೆ ಎರಡು ಹಚ್ಚೆ ಗುರುತುಗಳಿರುತ್ತವೆ. ಎಡಗೈ ಮೇಲೆ ಹೂವಿನ ಆಕಾರದ ಹಚ್ಚೆ ಗುರುತು ಹಿಂದಿ ಅಕ್ಷರದಲ್ಲಿ ದೋಲತಾತಿ ಎಂದಿರುತ್ತದೆ.

ಸಂಬಂಧಪಟ್ಟವರು ದಾವಣಗೆರೆ ರೈಲ್ವೆ ಪೊಲೀಸ್‌ ಠಾಣೆ (ದೂರವಾಣಿ 08192-259643, ಮೊ: 94808 00469, 94808 02123) ಯನ್ನು ಸಂಪರ್ಕಿಸಬಹುದು.

error: Content is protected !!