ದಾವಣಗೆರೆ ತರಳಬಾಳು ಬಡಾವಣೆ, ವಿದ್ಯಾನಗರ ವಾಸಿ ಶ್ರೀ ಕೆ. ಶಂಭುಲಿಂಗಪ್ಪ ಅವರು ದಿನಾಂಕ 7.7.2021ರ ಬುಧವಾರ ಸಂಜೆ 4 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 92 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 8.7.2021ರ ಗುರುವಾರ ಮಧ್ಯಾಹ್ನ 12 ಗಂಟೆಗೆ ಮೃತರ ಸ್ವಗ್ರಾಮ ದಾವಣಗೆರೆ ತಾಲ್ಲೂಕಿನ ಶಿರಗನಹಳ್ಳಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024