ರೇಣುಕಾಚಾರ್ಯ ಸೇರಿ ಜಿಲ್ಲೆಯಲ್ಲಿ 133 ಪಾಸಿಟಿವ್

ದಾವಣಗೆರೆ, ಏ.18- ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ 133 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟ ಬಗ್ಗೆ ಭಾನುವಾರ ವರದಿಯಾಗಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 96, ಹರಿಹರ 26, ಜಗಳೂರು 4, ಚನ್ನಗಿರಿ 2 ಹೊನ್ನಾಳಿ 2 ಹಾಗೂ ಹೊರ ಜಿಲ್ಲೆಯ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 39 ಜನರು ಸೋಂಕು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 597ಕ್ಕೆ ಏರಿಕೆಯಾಗಿ ದೆ. ಇಲ್ಲಿಯವರೆಗೆ 264 ಜನರು ಸಾವನ್ನಪ್ಪಿದ್ದಾರೆ.

error: Content is protected !!