ದಾವಣಗೆರೆ, ಫೆ.13- ಮಹಾನಗರ ವ್ಯಾಪ್ತಿಯ 22ನೇ ವಾರ್ಡ್ ಯಲ್ಲಮ್ಮ ನಗರದಲ್ಲಿ ಇದೇ ದಿನಾಂಕ 15ರ ಸೋಮವಾರ ಶ್ರೀ ಸಿದ್ಧಿ ವಿನಾಯಕ ಪ್ರಾಥಮಿಕ ಶಾಲೆಯಲ್ಲಿ ಮಹಾನಗರ ಪಾಲಿಕೆಯಿಂದ `ಮನೆಯ ಬಾಗಿಲಿಗೆ ಮಹಾನಗರ ಪಾಲಿಕೆ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಾರ್ಯಕ್ರಮದ ಸ್ಥಳಕ್ಕೆ ಮಹಾಪೌರ ಬಿ.ಜಿ.ಅಜಯ್ ಕುಮಾರ್ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು.
ಯಲ್ಲಮ್ಮ ನಗರದ ವ್ಯಾಪ್ತಿಯ 3ನೇ ಮೇನ್ 13ನೇ ಕ್ರಾಸ್‍ನಲ್ಲಿ ಕಳೆದ ಹಲವು ವರ್ಷಗಳಿಂದ ಸ್ವಚ್ಛ ವಾಗದೆಯಿದ್ದ ಚರಂಡಿಯನ್ನು ಪೌರ ಕಾರ್ಮಿಕರು ಸ್ಚಚ್ಛತೆ ಮಾಡುವ ವೇಳೆ ಸ್ಥಳಕ್ಕೆ ತೆರಳಿ ವೀಕ್ಷಣೆ ಮಾಡಿದರು.
ದಾವಣಗೆರೆ ನಗರ ಸ್ಮಾರ್ಟ್ ಸಿಟಿಯಾಗಿದ್ದು, ಜನರು ಕೂಡ ಸ್ಮಾರ್ಟ್ ಆಗುತ್ತಿದ್ದಾರೆ. ನಗರದ ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಪೌರ ಕಾರ್ಮಿಕರಿಗೆ ಪ್ರೋತ್ಸಾಹಿಸಲು ಸ್ವತಃ ಮಹಾಪೌರ ಅಜಯ್ ಕುಮಾರ್ ಅವರು ಚರಂಡಿಯನ್ನು ಸ್ಚಚ್ಛಗೊಳಿಸಿದರು. ನಗರದಲ್ಲಿ ಸ್ವಚ್ಛತೆ ಕಾಪಾಡಲು ಇನ್ನಷ್ಟು ಉತ್ಸಾಹದಿಂದ ಕಾರ್ಯ ನಿರ್ವಹಿಸುವ ಬಗ್ಗೆ ಮನವರಿಕೆ ಮಾಡಿ, ಕೆಲ ಅಗತ್ಯ ಸೂಚನೆಗಳನ್ನು ನೀಡುವ ಮೂಲಕ ಎಲ್ಲಾ ಹಂತದಲ್ಲೂ ಅವರು ಪೌರ ಕಾರ್ಮಿಕರೊಂದಿಗೆ ಇರುವುದಾಗಿ ಧೈರ್ಯ ತುಂಬಿದರು. ಈ ವೇಳೆ ಸ್ಥಳೀಯ ನಾಗರಿಕರು, ಪೌರ ಕಾರ್ಮಿಕರು ಸೇರಿದಂತೆ ಇತರರಿದ್ದರು.