ದಾವಣಗೆರೆ, ಜು.6- ಶಿರಮಗೊಂಡನಹಳ್ಳಿಯಲ್ಲಿ ಮೊನ್ನೆ ಗಂಗಾ ಜಯಂತಿಯನ್ನು ಆಚರಿಸುವುದರ ಮೂಲಕ ಈ ವರ್ಷ ಮಳೆ ಸಮೃದ್ಧಿಯಾಗಿ ರೈತರ ಬಾಳು ಹಸನಾಗಲೆಂದು ಪ್ರಾರ್ಥಿಸಲಾಯಿತು.
ವಕೀಲ ಜೆ. ಉಮೇಶ್ ನೇತೃತ್ವದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಗಂಗಾಮತ ಸಮಾಜದ ಮಹಿಳೆಯರಾದ ಭಾರತಿ, ಸುಷ್ಮಾ, ಸರಿತಾ, ಪುಷ್ಪಾ, ಮಾಲತಿ, ರೇಣುಕಾ, ಪ್ರೇಮಾ, ಅನಿತಾ, ವಾಣಿ, ಸವಿತಾ, ಮಾನಸ, ಜ್ಯೋತಿ ಇನ್ನಿತರರು ಗಂಗಾದೇವಿಗೆ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕೆ.ಎಂ. ಮಂಜುನಾಥ್, ಕೆ. ಶಿವಮೂರ್ತಿ, ಜೆ. ಮೋಹನ್‌ಕುಮಾರ್, ರಮೇಶ್‌ಚಂದ್ರ, ಬಾಬು, ಮಲ್ಲಪ್ಪ, ರಾಮಣ್ಣ, ಮಾಲತೇಶ್, ಆಕಾಶ್, ಗಜೇಂದ್ರ, ರಾಜು, ಕೊಟ್ರೇಶ್, ಮಂಜುನಾಥ್ ಹಾಜರಿದ್ದರು.