ಮಲೇಬೆನ್ನೂರು, ಫೆ.14- ಸಮೀಪದ ಕೊಕ್ಕನೂರು ಗ್ರಾಮದ ವಾಸವಿ ಯುವಜನ ಸಂಘ ಮತ್ತು ವಾಸವಿ ಮಹಿಳಾ ಸಂಘಗಳ ಆಶ್ರಯದಲ್ಲಿ ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರ ಆತ್ಮಾರ್ಪಣಾ ದಿನವನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಮುತ್ತೈದೆಯರು ಗಂಗಾಪೂಜೆ ನೆರವೇರಿಸಿ, ಮೆರವಣಿಗೆಯಲ್ಲಿ ಕಳಸ ತಂದು ಸಿಂಗರಿಸಿದ ಮಂಟಪದಲ್ಲಿ ಸ್ಥಾಪಿಸಲಾಯಿತು. ನಂತರ ಮಹಿಳೆಯರು, ಪುರುಷರು ಶ್ರೀ ಅಮ್ಮನವರ ಭಜನೆ, ಕೀರ್ತನೆ, ಗೀತೆಗಳನ್ನು ಹಾಡಿದರು. ವಾಸವಿ ಯುವಜನ ಸಂಘದ ಮತ್ತು ವಾಸವಿ ಮಹಿಳಾ ಸಂಘದ ಪದಾಧಿಕಾರಿಗಳು, ಆರ್ಯವೈಶ್ಯ ಸಮಾಜದ ಹಿರಿಯರು ಹಾಜರಿದ್ದರು.
February 25, 2025