ಹರಿಹರ, ಫೆ.11- ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಶ್ರೀ ಪುರಂದರ ದಾಸೋತ್ಸವ ಸಮಾರಂಭದ ನಿಮಿತ್ತವಾಗಿ ಶ್ರೀ ಹರಿಹರೇಶ್ವರ ದೇವಸ್ಥಾನದಿಂದ ಶ್ರೀ ಪುರಂದರ ದಾಸೋತ್ಸವ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಸಂಜೆ ದಾಸರ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಶೋಭಾ ಯಾತ್ರೆಯು ಶ್ರೀ ಹರಿಹರೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು ರಾಜಬೀದಿಗಳ ಮುಖಾಂತರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆವರಣಕ್ಕೆ ಬಂದು ತಲುಪಿತು. ನಂತರದಲ್ಲಿ ಮಠದ ಆವರಣದಲ್ಲಿ ಬೆಳ್ಳಿ ರಥೋತ್ಸವ, ಮಹಾಮಂಗಳಾರತಿ, ಭಜನೆ, ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ರಾಘವೇಂದ್ರ ಸ್ವಾಮಿ ಮಠದ ಪ್ರಧಾನ ಗುರುಗಳಾದ ಶ್ರೀ ವರಹಾಚಾರ್, ಪವನ್ ಕುಮಾರ್, ಮಾಜಿ ನಗರಸಭೆ ಉಪಾಧ್ಯಕ್ಷೆ ಅಂಬುಜಾ ಪಿ. ರಾಜೋಳ್ಳಿ, ರೂಪಾ ಕಾಟ್ವೆ, ಮಂಜುಳಾ, ದೇವಿರಮ್ಮ, ವಿವಿಧ ಮಹಿಳಾ ಭಜನಾ ಮಂಡಳಿಯ ಸದಸ್ಯರು ಹಾಜರಿದ್ದರು