ದಾವಣಗೆರೆ, ಫೆ.11- ಮಹಾನಗರ ವ್ಯಾಪ್ತಿಯ 17ನೇ ವಾರ್ಡಿನ ಪಿ.ಜೆ. ಬಡಾವಣೆಯ ಪಿಸಾಳೆ ಕಾಂಪೌಂಡ್‌ನಲ್ಲಿ ಯು.ಜಿ.ಡಿ ಕಾಮಗಾರಿ ಪೂರ್ಣ ಗೊಂಡಿದ್ದು, ಮಹಾಪೌರ ಬಿ.ಜಿ.ಅಜಯ್ ಕುಮಾರ್ ಅವರು ಇಂದು ಕಾಮಗಾರಿ ಪರಿಶೀಲಿಸಿದರು.
ಮಳೆಗಾಲದಲ್ಲಿ ಸ್ಥಳೀಯರಿಗೆ ತೊಂದರೆಯಾಗಬಾರದೆಂದು ಮಳೆ ನೀರು ಕಾಲುವೆ ಕಾಮಗಾರಿ, ರಾಜಕಾಲುವೆ ಮತ್ತು ಬಾಕ್ಸ್ ಚರಂಡಿ ಮೇಲ್ಭಾಗದಲ್ಲಿ ಅಳವಡಿಸಿರುವ ಸ್ಲ್ಯಾಬ್‌ಗಳನ್ನು ಪರಿಶೀಲಿಸಿ, ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಪಿಸಾಳೆ ಕಾಂಪೌಂಡ್‌ನ ಒಂದು ಮತ್ತು ಎರಡನೇ ಕ್ರಾಸ್‌ನಲ್ಲಿ ನೀರಿನ ಸಮಸ್ಯೆ ಬಗ್ಗೆ ಸ್ಥಳೀಯರು ಮನವಿ ಮಾಡಿದ ಹಿನ್ನೆಲೆಯಲ್ಲಿ ಕೂಡಲೇ ಸ್ಥಳವನ್ನು ಗುರುತಿಸಿ ಆ ಜಾಗದಲ್ಲಿ ಕೊಳವೆ ಬಾವಿ ಕೊರೆಯಲು ಅಧಿಕಾರಿಗಳು ಸೂಚನೆಗಳನ್ನು ನೀಡಿದರು.