ದಾವಣಗೆರೆ, ಏ. 14- ನಗರದ ಪತಂಜಲಿ ಶಿಕ್ಷಣ ಸಮಿತಿ ವತಿಯಿಂದ ಈಚೆಗೆ ನಡೆದ ಒಂದು ದಿನದ ಯೋಗ ತರಬೇತಿ ಕಾರ್ಯಾಗಾರದಲ್ಲಿ ಯೋಗ ಸಾಧನೆಯ ಹಾದಿಯಲ್ಲಿ ನಡೆಯುತ್ತಿರುವ ನಗರದ ಸಿದ್ದಗಂಗಾ ಶಾಖೆ ಯೋಗ ಶಿಕ್ಷಕಿ ಹಾಗೂ ಯಲ್ಲಮ್ಮನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಶ್ರೀಮತಿ ಎಸ್. ಮಂಜುಳ ಬಸನಗೌಡ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಪತಂಜಲಿ ಯೋಗ ಶಿಕ್ಷಣ ಸಮಿತಿಯ ರಾಜ್ಯ ಪ್ರಭಾರಿ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಆರತಿ, ಬೆಳಗಾವಿ ಜಿಲ್ಲೆಯಿಂದ ಆಗಮಿಸಿದ್ದ ಶ್ರೀಮತಿ ಕವಿತಾ ಮತ್ತು ಜಿಲ್ಲೆಯ ಮಹಿಳಾ ಪ್ರಭಾರಿ ಶ್ರೀಮತಿ ಅಂಜಲಿ ದೇವಿ ಮತ್ತಿತರರು ಉಪಸ್ಥಿತರಿದ್ದರು.
December 27, 2024