ದಾವಣಗೆರೆ,ಫೆ.10- ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕ ನಗರದ ಕದಳಿ ಮಹಿಳಾ ವೇದಿಕೆ ವತಿಯಿಂದ ತನ್ನ ವಾರ್ಷಿಕೋತ್ಸವದ ಅಂಗವಾಗಿ ಈಚೆಗೆ ನಡೆಸಿದ ಕಾರ್ಯಕ್ರಮದ ಸಂದರ್ಭದಲ್ಲಿ ಕೊರೊನಾ ವಾರಿಯರ್ ಗಳಾದ ಡಾ|| ಸರಿತಾ, ಡಾ|| ಉಮಾ, ಡಾ|| ಶಿಲ್ಪಶ್ರೀ, ಡಾ|| ಅರುಣಕುಮಾರಿ, ಡಾ|| ಗೀತಾ, ಡಾ|| ವಿಂಧ್ಯಾ, ಡಾ|| ಸುಮ, ಡಾ|| ಸುಪರ್ಣ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
`ಕದಳಿ ಶ್ರೀ’ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಜಯಮ್ಮ ನೀಲಗುಂದ ಮತ್ತು ವೇದಿಕೆಯ ಪದಾಧಿಕಾರಿಗಳು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.