ದಾವಣಗೆರೆ, ಜು. 5- ತಾಲ್ಲೂಕು ಕಚೇರಿ ಮುಂಭಾಗದಲ್ಲಿರುವ ಮಳಿಗೆ ಗಳನ್ನು ರೈತರಿಗೆ ಮೀಸಲಿಡುವಂತೆ ರೈತ ಮುಖಂಡರು ಒತ್ತಾಯಿಸಿದ್ದಾರೆ.
ರೈತ ಭವನ, ತಾಲ್ಲೂಕು ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದ ಮುಖಂಡರು, ಎಪಿಎಂಸಿ ಕಾರ್ಯದರ್ಶಿ ಹಾಗೂ ಸಮಿತಿಯವರು ಕೂಡಲೇ ಈ ವಿಷ ಯವನ್ನು ಗಂಭೀರವಾಗಿ ಪರಿಗಣಿಸಿ ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ದಾವಣಗೆರೆ ತಾಲ್ಲೂಕಿನಲ್ಲಿ 173 ಗ್ರಾಮಗಳಿದ್ದು, ಹಣ್ಣು, ತರಕಾರಿ, ಹೂ ಇತ್ಯಾದಿ ಬೆಳೆಯುವ ಸುಮಾರು 5 ಸಾವಿರ ಬೆಳೆಗಾರರಿದ್ದಾರೆ. ಇವರು ದಿನವಹಿ ತರಕಾರಿ, ಹಣ್ಣು, ಹೂ ಮಾರಾಟಕ್ಕೆ ನಗರಕ್ಕೆ ಆಗಮಿಸುತ್ತಾರೆ.
ರೈತ ಭವನದ ಮುಂದಿನ ಸಾಲುಗಳಲ್ಲಿರುವ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ನೀಡಲಾಗಿದೆ. ಆದರೆೆ ಮೂಲ ಬಾಡಿಗೆದಾರರು ಅಲ್ಲಿ ವ್ಯಾಪಾರ ನಡೆಸದೇ ಬೇರೆಯವವರು ವ್ಯಾಪಾರ ನಡೆಸುತ್ತಿದ್ದಾರೆ. ಇದೂ ಸಹ ಅಕ್ರಮವಾಗಿರುತ್ತದೆ. ಮೂಲ ಬಾಡಿಗೆದಾರರು ನಡೆಸದೇ ಇರುವ ಮಳಿಗೆಗಳನ್ನು ತೆರವುಗೊಳಿಸಬೇಕು.
2019-20ನೇ ಸಾಲಿನಲ್ಲಿ ತಾಲ್ಲೂಕು ರೈತ ಸಂಘದಿಂದ ಎಪಿಎಂಸಿ ಕಾರ್ಯದರ್ಶಿಗೆ ಇಲ್ಲಿನ ಮಳಿಗೆಗಳನ್ನು ರೈತರಿಗೆ ಮೀಸಲಿರಿ ಸಲು ಮನವಿ ಸಲ್ಲಿಸಲಾಗಿತ್ತು. ಆದರೆ ಅರ್ಜಿ ಸಲ್ಲಿಸಿದವರಿಗೆ ಮಾಹಿತಿ ನೀಡದೇ ರೈತರಲ್ಲದವರಿಗೆ ಹಾಗೂ ವರ್ತಕರಿಗೆ ಕಾನೂನು ಬಾಹಿರವಾಗಿ ಮಳಿಗೆ ಮಂಜೂರು ಮಾಡಿ ಬಾಡಿಗೆ ನೀಡ ಲಾಗಿದೆ ಎಂದು ಪ್ರತಿ ಭಟನಾಕಾರರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಆವರಗೆರೆ ರುದ್ರಮುನಿ, ಬಲ್ಲೂರು ರವಿಕುಮಾರ್, ಹೊನ್ನೂರು ಮುನಿಯಪ್ಪ, ಅಣಬೇರು ಅಣ್ಣಪ್ಪ, ಲೋಹಿತ್ ತೋಳಹುಣಸೆ, ಶಂಕ್ರಪ್ಪ, ಶಿವಕುಮಾರ್ ಇತರರು ಇದ್ದರು.