ಅಸಂಘಟಿತ ಕಾರ್ಮಿಕ ವಲಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆಗೆ ಆಗ್ರಹ

ದಾವಣಗೆರೆ, ಜು.4- ಲಾಕ್‌ಡೌನ್‌ನಿಂದಾಗಿ ಅಸಂಘಟಿತ ಕಾರ್ಮಿಕ ವಲಯವು ಅತ್ಯಂತ ತೊಂದರೆಗೀಡಾಗಿದ್ದು, ಕೇಂದ್ರ ಸರ್ಕಾರ ಕೂಡಲೇ ವಿಶೇಷ ಪ್ಯಾಕೇಜ್‌ ಘೋಷಿಸಬೇಕೆಂದು ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ನಂಜಾನಾಯ್ಕ ಕಬ್ಬಳ ಆಗ್ರಹಿಸಿದ್ದಾರೆ.

ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿ,    ಈಗಾಗಲೇ ವಿವಿಧ ವಲಯಗಳಿಗೆ ಪ್ಯಾಕೇಜ್‌ ಘೋಷಿಸಿದ ಹಾಗೆ ಅಸಂಘಟಿತ ವಲಯಕ್ಕೂ ಕೂಡಲೇ ವಿಶೇಷ ಪ್ಯಾಕೇಜ್‌ ಘೋಷಿಸಿ ನೊಂದ ಕುಟುಂಬಗಳಿಗೆ ಆಸರೆಯಾಗ ಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಬಿ.ಹೆಚ್. ವೀರಭದ್ರಪ್ಪ ಮಾತನಾಡಿ, ಸಂಕಷ್ಟ ಕಾಲದಲ್ಲಿ ಎಲ್ಲಾ ವಲಯ ಗಳಿಗೆ ಪ್ಯಾಕೇಜ್ ಘೋಷಿಸಿರುವ ಸರ್ಕಾರಗಳು ಅಸಂಘಟಿತ ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡಿದ್ದು, ಇದರಿಂದಾಗಿ ಅನೇಕ ಕುಟುಂಬಗಳಿಗೆ ಅತೀವ ತೊಂದರೆಯಾಗಿದೆ. ಸರ್ಕಾರಗಳು ಮನವಿಯನ್ನು ಪರಿಗಣಿಸಿ, ಸೂಕ್ತ ಕ್ರಮ ಕೈಗೊಂಡು ಸಹಾಯ ಹಸ್ತ ಚಾಚುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಅಸಂಘಟಿತ ಕಾರ್ಮಿಕ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಲಿಯಾಖತ್ ಅಲಿ, ಕಾರ್ಯದರ್ಶಿ ಹೆಚ್. ಹರೀಶ್, ಮುಖಂಡರಾದ ಸುರೇಶ್ ಎಂ. ಜಾಧವ್, ಮಹಬೂಬ್ ಬಾಷಾ, ಮೊಹಮ್ಮದ್ ಜಿಕ್ರಿಯಾ, ರಿಯಾಜುದ್ದೀನ್ ಹಾಗು ಇನ್ನಿತರರು ಭಾಗವಹಿಸಿದ್ದರು.

error: Content is protected !!