ವೈದ್ಯಕೀಯ ವಿದ್ಯಾರ್ಥಿಗಳಿಗೆ ಕ್ಯಾಡರಿಕ್ ಪ್ರಮಾಣ ವಚನ

ದಾವಣಗೆರೆ, ಫೆ.10- ನಗರದ ಜ.ಜ.ಮು ವೈದ್ಯಕೀಯ ಮಹಾವಿದ್ಯಾಲಯದ ಅಂಗ ರಚನಾಶಾಸ್ತ್ರ ವಿಭಾಗದಲ್ಲಿ ಅಂಗ ವಿಚ್ಛೇದನ ವಿಭಾಗ (ಡಿಸೆಕ್ಷನ್ ಸೆಕ್ಷನ್) ನಲ್ಲಿ 2020-2021ನೇ ಸಾಲಿನ ನೂತನ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕ್ಯಾಡರಿಕ್ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು. 

ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಬಿ. ಮುರುಗೇಶ್, ವಿಭಾಗದ ಮುಖ್ಯಸ್ಥರಾದ ಡಾ. ನಿರ್ಮಲ ಮತ್ತು ಇತರರು ಕಾರ್ಯಕ್ರಮದ  ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: Content is protected !!