ನಂದೀಶ ಆತ್ಮಹತ್ಯೆ ಪ್ರಕರಣ : ಆರೋಪಿಗಳಿಗೆ ಮಧ್ಯಂತರ ಜಾಮೀನು

ಹೂವಿನಹಡಗಲಿ, ಎ.9- ಪಟ್ಟಣದ ನಿವಾಸಿ ಟಿ. ನಂದೀಶ ಪಾಟೀಲ್ ಆತ್ಮಹತ್ಯೆ ಪ್ರಕರಣದ ಆರೋಪಿಗಳಾಗಿರುವ 22 ಜನರಿಗೆ ಹೊಸಪೇಟೆಯ ಹಿರಿಯ ಶ್ರೇಣಿ ನ್ಯಾಯಾಲಯ ಇಂದು ಮಧ್ಯಂತರ ಜಾಮೀನು ನೀಡಿದೆ ಎಂದು ತಿಳಿದುಬಂದಿದೆ. 

ಆರೋಪಿತರು ತನಗೆ  ಸಾಲದ ಹಣವನ್ನು ಸಕಾಲದಲ್ಲಿ ಕೊಡದ ಕಾರಣ  ಆರ್ಥಿಕ ತೊಂದರೆ ಎದುರಾಗಿದೆ  ಎಂದು ಡೆತ್‌ ನೋಟ್‌  ಬರೆದು ಸಂಬಂಧಿಸಿದ ಅಧಿಕಾರಿಗಳಿಗೆ ಇ-ಮೇಲ್ ಮೂಲಕ ರವಾನಿಸಿ ಇತ್ತೀಚಿಗೆ ತಮ್ಮ ಮನೆಯಲ್ಲಿದ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಈ ಬಗ್ಗೆ ನಂದೀಶನ ತಂದೆ ಕೊಟ್ಟ ದೂರಿನ ಮೇರೆಗೆ ಹಡಗಲಿ ಪೊಲೀಸರು ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಕಾನೂನು ಕಮಕ್ಕೆ ಮುಂದಾಗಿದ್ದರು. ಸದರಿ ಪ್ರಕರಣದಲ್ಲಿ ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ವ್ಯಾಪಾರಿಗಳು ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. 

ಲಕ್ಷಾಂತರ ಹಣವನ್ನು ಕೊಡದೆ ಸತಾಯಿಸುತ್ತಿದ್ದಾರೆ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಬೆಂಗಳೂರಿನಲ್ಲಿ ಕಂಪನಿಯಲ್ಲಿ  ಕೆಲಸ ಮಾಡುತ್ತಿದ್ದ. ಆದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ  ಕೆಲಸ ಬಿಟ್ಟು  ಹಡಗಲಿಗೆ ಬಂದಿದ್ದು, ಈ ನಡುವೆ ಕಿತ್ತೂರು ರಾಣಿ ಚೆನ್ನಮ್ಮ  ಸೊಸೈಟಿ ನಿರ್ದೇಶಕನಾಗಿ ಚುನಾಯಿತನಾಗಿದ್ದ. ಈಚೆಗೆ ವಿ.ವಿ.ಸಂಘದ ಕಾರ್ಯಕಾರಿ ಮಂಡಳಿ ಚುನಾವಣೆಯಲ್ಲಿ  ಸ್ಪರ್ಧಿಸಿ ಸೋತಿದ್ದನು.

error: Content is protected !!