ಚಳ್ಳಕೆರೆ, ಫೆ.7- ಪ್ರಸ್ತುತ ಆಧುನಿಕ ಯುಗದಲ್ಲಿ ಮ್ಯಾಸಬ್ಯಾಡರ ಹಲವು ಬುಡಕಟ್ಟು ಸಂಸ್ಕೃತಿ ಮರೆಯಾಗುತ್ತಿದ್ದು, ಮ್ಯಾಸಬ್ಯಾಡರಲ್ಲಿ ಹೆಚ್ಚಿನ ಶಿಕ್ಷಣದ ಜೊತೆಗೆ ಕಣ್ಮರೆಯಾಗುತ್ತಿರುವ ಮ್ಯಾಸಬ್ಯಾಡರ ಸಂಸ್ಕೃತಿ ಉಳಿಸಿ, ಬೆಳೆಸಬೇಕಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ವಾಲ್ಮೀಕಿ ಕಲ್ಯಾಣ ಮಂಟಪ ಟ್ರಸ್ಟ್ ಮತ್ತು ನಾಯಕರ ಹಾಸ್ಟೆಲ್ ಕಮಿಟಿ ಇವರ ಸಂಯುಕ್ತ ಆಶ್ರಯದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಪಿ. ತಿಪ್ಪೇಸ್ವಾಮಿ ಅವರ ಮ್ಯಾಸಬ್ಯಾಡರ ಮೌಖಿಕ ಕಥನಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪುಸ್ತಕವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಜನಪದ ವಿದ್ವಾಂಸರಾದ ಮೀರಾಸಾಬಿಹಳ್ಳಿ ಶಿವಣ್ಣ, ಜಾನಪದ ತಜ್ಞರು ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ಎಂ.ಎಸ್ ಮುತ್ಯಯ್ಯ, ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ, ಲೇಖಕ ಟಿ. ತಿಪ್ಪೇಸ್ವಾಮಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಾಹಿತಿ ಮರಿಕುಂಟೆ ತಿಪ್ಪಣ್ಣ, ಹೆಚ್.ಪಿ ರಾಜೀವ್, ಡಾ. ಸಿ.ಪಿ.ಜಿ ಚಂದ್ರು, ಡಾ. ಬಿ. ರಾಜಶೇಖರಪ್ಪ, ಡಾ. ಡಿ. ಧರಣೇಂದ್ರಯ್ಯ, ಬಾಳೆಕಾಯಿ ರಾಮದಾಸ್, ತಿಪ್ಪೇಸ್ವಾಮಿ, ವೀರಭದ್ರಪ್ಪ, ಬೋರನಾಯಕ, ನಿಸರ್ಗ ಗೋವಿಂದರಾಜ್ ಮತ್ತಿತರರು ಉಪಸ್ಥಿತರಿದ್ದರು.