ದಾವಣಗೆರೆ, ಫೆ.7- ಶ್ರೀಗಂಧದ ಮರಗಳನ್ನು ಕಡಿದು ತುಂಡು ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ನಗರದ ಗ್ರಾಮಾಂತರ ಪೊಲೀಸರು 19,450 ಕೆ.ಜಿ.ಯಷ್ಟು ಶ್ರೀಗಂಧದ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಲೋಕಿಕೆರೆ ಯಲ್ಲಮ್ಮ ನಗರದ ಗಂಗಾಧರಪ್ಪ ಮತ್ತು ಈತನ ಸಹಚರ ಶಿವಮೊಗ್ಗದ ಚೆಲುವ ಬಂಧಿತರು. ಇನ್ನುಳಿದ ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಗೆ ತಂಡ ರಚಿಸಲಾಗಿದೆ.
ಬಂಧಿತರು ಕಳ್ಳತನದಿಂದ ಶ್ರೀಗಂಧದ ಮರಗಳನ್ನು ಕಡಿದುಕೊಂಡು ಅದನ್ನು ತುಂಡು ಮಾಡಿ ತಮ್ಮ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಕೊಂಡಿದ್ದರು. ಗ್ರಾಮಾಂತರ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ಮಾರ್ಗದರ್ಶನದಲ್ಲಿ ಸಿಪಿಐ ಬಿ. ಮಂಜುನಾಥ, ಹದಡಿ ಠಾಣೆ ಪಿಎಸ್ ಐ ಪಿ. ಪ್ರಸಾದ್ ಮತ್ತು ಸಿಬ್ಬಂದಿಗಳಾದ ಮಂಜುನಾಥ, ವಿಶ್ವನಾಥ, ಶಿವಕುಮಾರ್, ವೀರಭದ್ರಪ್ಪ, ಅಣ್ಣಪ್ಪ, ಸಿದ್ದೇಶ್, ಅಶೋಕ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿ ರಾಮಚಂದ್ರಪ್ಪ ಅವರೊಂದಿಗೆ ಲೋಕಿಕೆರೆ ಯಲ್ಲಮ್ಮ ನಗರದ ರಾಜಪ್ಪನ ಮನೆ ಮೇಲೆ ಇಂದು ದಾಳಿ ನಡೆಸಿದ್ದಾರೆ.