ದಾವಣಗೆರೆ, ಏ.8- ನಗರದ ಜೆ.ಹೆಚ್. ಪಟೇಲ್ ಬಡಾವಣೆಯ ಶ್ರೀ ಶಬರಿ ಮಹಿಳಾ ಸಂಘದಿಂದ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಬೇಬಿ ಸುನಿತ ರುದ್ರಪ್ಪ ಮಾತನಾಡಿ, ಮನಸ್ಸು ಮಾಡಿದರೆ ಮಹಿಳೆ ಯಾವುದೇ ವಯಸ್ಸಿನಲ್ಲಾದರೂ ಸಾಧನೆ ಮಾಡಬಲ್ಲಳು ಎಂದು ಹೇಳಿದರು.
ಇನ್ನೋರ್ವ ಅತಿಥಿ ಪ್ರೌಢಶಾಲಾ ನಿವೃತ್ತ ಶಿಕ್ಷಕ ಟಿ. ಗುರುಮೂರ್ತಿ ಮಾತನಾಡಿ, ಸ್ತ್ರೀ ಶಕ್ತಿಗಿಂತ ಮಿಗಿಲಾದ ಶಕ್ತಿ ಮತ್ತೊಂದಿಲ್ಲ ಎಂದರು. ಈ ಸಂದರ್ಭದಲ್ಲಿ ಶಬರಿ ಮಹಿಳಾ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ವಸಂತ ಚಂದ್ರಣ್ಣ ಅವರಿಗೆ `ಸಂಘಟನಾ ಚತುರೆ’ ಬಿರುದು ನೀಡಲಾಯಿತು.
ಕೊರೊನಾ ವಾರಿಯರ್‌ಗಳಾದ ಆಶಾ ಕಾರ್ಯಕರ್ತೆ ಶ್ರೀಮತಿ ಕಾಳಮ್ಮ, ಆರೋಗ್ಯ ಸಹಾಯಕಿ ಶ್ರೀಮತಿ ಎಸ್. ರೇಣುಕ ಅವರನ್ನು ಸನ್ಮಾನಿಸಲಾಯಿತು.
ಕು. ಮಾನಸ ಪ್ರಾರ್ಥಿಸಿದರು. ಶ್ರೀಮತಿ ಪುಷ್ಪಾ ಅಜ್ಜಯ್ಯ ಸ್ವಾಗತಿಸಿದರು. ಶ್ರೀಮತಿ ವಿಜಯ ವೀರೇಂದ್ರ, ಶ್ರೀಮತಿ ಸುಜಾತ ಮಹೇಶ್ ಅವರುಗಳು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರವೀಣ ಚಂದ್ರಶೇಖರ್ ವಂದಿಸಿದರು.
ಶಬರಿ ಮಹಿಳಾ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ವಸಂತ ಚಂದ್ರಣ್ಣ, ಗೌರವಾಧ್ಯಕ್ಷೆ ಶ್ರೀಮತಿ ಜಿ.ಎನ್. ಕಲ್ಪನ, ಕಾರ್ಯದರ್ಶಿ ಪ್ರೇಮಲತಾ ರವಿಕುಮಾರ್, ಸಹ ಕಾರ್ಯದರ್ಶಿ ಶೋಭಾ ಸುರೇಶ್ ಬಾಬು, ಖಜಾಂಚಿ ಕಲ್ಪನಾ ಹಿರೇಮಠ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.